ADVERTISEMENT

ಮೋದಿ ವ್ಯಾಕ್ಸಿನೇಷನ್ ತಂತ್ರ ಭಾರತ ಮಾತೆಯ ಹೃದಯಕ್ಕೆ ಚಾಕು ಇರಿದಂತೆ: ರಾಹುಲ್

ಪಿಟಿಐ
Published 31 ಮೇ 2021, 16:24 IST
Last Updated 31 ಮೇ 2021, 16:24 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ    

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಶೂನ್ಯ ಲಸಿಕಾ ಅಭಿಯಾನ ನೀತಿಯು ಭಾರತ ಮಾತೆಯ ಹೃದಯಕ್ಕೆ ಚಾಕು ಇರಿದಂತೆ ಎಂದು ಸೋಮವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗಂಭೀರವಾದ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸರ್ಕಾರದ ವ್ಯಾಕ್ಸಿನೇಷನ್ ತಂತ್ರ ಭಾರತ ಮಾತೆಯ ಹೃದಯದಲ್ಲಿ ಚಾಕು ಇರಿದಂತೆ. ಇದು ದುರಂತ ಸತ್ಯ ಎಂದು ಟೀಕೆಗೈದಿದ್ದಾರೆ.

ಕೇಂದ್ರ ಸರ್ಕಾರದ ದುರಹಂಕಾರದಿಂದಾಗಿ ಶೇಕಡಾ 97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಓರ್ವ ವ್ಯಕ್ತಿ (ಪ್ರಧಾನಿ ನರೇಂದ್ರ ಮೋದಿ) ಹಾಗೂ ಆತನ ದುರಹಂಕಾರ ಮತ್ತು ಒಂದು ವೈರಸ್ ಹಾಗೂ ಅದರ ರೂಪಾಂತರ ತಳಿಗಳಿಂದ ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.