ADVERTISEMENT

ಜುಬೀನ್‌ ಗರ್ಗ್ ಸಾವು ಪ್ರಕರಣ: ತನಿಖೆ ಕೋರಿ ಅಸ್ಸಾಂ CIDಗೆ ಕುಟುಂಬಸ್ಥರಿಂದ ದೂರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 8:58 IST
Last Updated 28 ಸೆಪ್ಟೆಂಬರ್ 2025, 8:58 IST
<div class="paragraphs"><p>ಜುಬೀನ್‌ ಗರ್ಗ್‌</p></div>

ಜುಬೀನ್‌ ಗರ್ಗ್‌

   

ಗುವಾಹಟಿ: ಜನಪ್ರಿಯ ಗಾಯಕ ಜುಬೀನ್‌ ಗರ್ಗ್‌ ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಕೋರಿ ಕುಟುಂಬಸ್ಥರು ಸಿಐಡಿಗೆ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಜುಬೀನ್‌ ಗರ್ಗ್‌ ಅವರ ಚಿಕ್ಕಪ್ಪ ಮನೋಜ್ ಕುಮಾರ್ ಬೊರ್ಥಾಕೂರ್‌ ಅವರು ಸಿಐಡಿಗೆ ಇ–ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜುಬೀನ್‌ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ಗರ್ಗ್ ಅವರ ಪತ್ನಿ ಗರಿಮಾ ಮತ್ತು ಅವರ ಸಹೋದರಿ ಪಾಲ್ಮೆ ಬೊರ್ಥಾಕೂರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಗರ್ಗ್ ಕುಟುಂಬದಿಂದ ದೂರು ಸ್ವೀಕರಿಸಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ನಾರ್ತ್‌ ಈಸ್ಟ್‌ ಇಂಡಿಯಾ ಫೆಸ್ಟಿವಲ್‌’ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಂಗಪುರಕ್ಕೆ ತೆರಳಿದ್ದ ಜುಬೀನ್‌ ಅವರು, ಸೆಪ್ಟೆಂಬರ್ 19ರಂದು ಸ್ಕೂಬಾ ಡೈವಿಂಗ್‌ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿತ್ತು.

ಗರ್ಗ್ ಅವರ ಅಂತಿಮ ಸಂಸ್ಕಾರವನ್ನು ರಾಜ್ಯ ಸರ್ಕಾರಿ ಗೌರವಗಳೊಂದಿಗೆ ಗುವಾಹಟಿಯ ಹೊರವಲಯ ಕಾಮಾರ್‌ಕುಚಿಯಲ್ಲಿ ಮಂಗಳವಾರ (ಸೆ.23) ನೆರವೇರಿಸಲಾಗಿತ್ತು.

ಗರ್ಗ್‌ ಸಾವಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಅವರು ಈಚೆಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.