ADVERTISEMENT

ಉಪಚುನಾವಣೆ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 8:00 IST
Last Updated 18 ಮಾರ್ಚ್ 2012, 8:00 IST

ಬೆಂಗಳೂರು (ಐಎಎನ್‌ಎಸ್): ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ರಾಜೀನಾಮೆಯಿಂದ ತೆರವಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ-ಚುನಾವಣೆಗೆ ಮತದಾನವು ಭಾನುವಾರ ಶಾಂತಿಯುತವಾಗಿ ಮುಕ್ತಾಯ ಕಂಡಿದೆ.

ಶೇ. 60 ರಷ್ಟು ಮತದಾನವಾಗಿದ್ದು, ಎಲ್ಲೆಡೆ ಶಾಂತಿಯುತವಾಗಿತ್ತೆಂದು ಪ್ರಾಥಮಿಕ ವರದಿಗಳು ತಿಳಿಸಿವೆ

ಆರಂಭದಲ್ಲಿ ಬೆಳಿಗ್ಗೆ ಮತದಾನ ಅತ್ಯಂತ ನೀರಸವಾಗಿತ್ತೆಂದು ವರದಿಗಳು ತಿಳಿಸಿದರೂ ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಕ್ರಮೇಣ ಚುರುಕುಗೊಂಡಿತು. ಮಧ್ಯಾಹ್ನದ ನಂತರವಂತೂ ಮತದಾನ ವೇಗ ಪಡೆದು ಅಂತಿಮವಾಗಿ ಸಂಜೆ ಹೊತ್ತಿಗೆ ಶೇ.60 ರಷ್ಟು ಮತದಾನವಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.