ADVERTISEMENT

ಚಿರತೆ ಮರಿಗಳ ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 19:30 IST
Last Updated 10 ಡಿಸೆಂಬರ್ 2017, 19:30 IST
ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗ್ರಾಮದ ಬೇಬಿಬೆಟ್ಟದ ಬಳಿ ಇದ್ದ ಚಿರತೆ ಮರಿಗಳನ್ನು ಗ್ರಾಮದ ಯುವಕರು ಸೆರೆ ಹಿಡಿದರು
ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗ್ರಾಮದ ಬೇಬಿಬೆಟ್ಟದ ಬಳಿ ಇದ್ದ ಚಿರತೆ ಮರಿಗಳನ್ನು ಗ್ರಾಮದ ಯುವಕರು ಸೆರೆ ಹಿಡಿದರು   

ಪಾಂಡವಪುರ (ಮಂಡ್ಯಜಿಲ್ಲೆ): ತಾಲ್ಲೂಕಿನ ಬನ್ನಂಗಾಡಿ ಗ್ರಾಮ ಸಮೀಪದ ಬೇಬಿಬೆಟ್ಟದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡ ಎರಡು ಚಿರತೆ ಮರಿಗಳನ್ನು ಗ್ರಾಮದ ಯುವಕರು ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

ಗ್ರಾಮದ ದೇವರಾಜು, ನಂದೀಶ್, ರವಿ, ಮರಣ್ಣ, ಶೇಖರ್‌ ಅವರು ಚಿರತೆ ಮರಿಗಳನ್ನು ಸೆರೆ ಹಿಡಿದರು. ಬನ್ನಂಗಾಡಿ, ಬಿಂಡಹಳ್ಳಿ, ಡಿಂಕಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಎರಡು ತಿಂಗಳಲ್ಲಿ 5 ಕುರಿ, 3 ಮೇಕೆಯನ್ನು ಚಿರತೆ ತಿಂದುಹಾಕಿತ್ತು. ಚಿರತೆ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT