ADVERTISEMENT

ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಆನೆ ದಾಳಿಗೆ ಬಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 10:15 IST
Last Updated 3 ಮಾರ್ಚ್ 2018, 10:15 IST
ಒಂಟಿ‌ ಸಲಗದ ದಾಳಿಗೆ ಒಳಗಾದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಅವರು ಆಸ್ಪತ್ರೆಗೆ ಕರೆತರಲಾಗಿತ್ತು. ಮಣಿಕಂಠನ್‌(ಒಳಚಿತ್ರ).
ಒಂಟಿ‌ ಸಲಗದ ದಾಳಿಗೆ ಒಳಗಾದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಅವರು ಆಸ್ಪತ್ರೆಗೆ ಕರೆತರಲಾಗಿತ್ತು. ಮಣಿಕಂಠನ್‌(ಒಳಚಿತ್ರ).   

ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಬಳ್ಳೆ ಶಿಬಿರದಲ್ಲಿ ಶನಿವಾರ ಒಂಟಿ‌ ಸಲಗದ ದಾಳಿಯಿಂದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಅವರು ಮೃತಪಟ್ಟಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಭಾಸ್ಕರ್ ಈ ವಿಷಯ ತಿಳಿಸಿದ್ದಾರೆ.

ಮಧ್ಯಾಹ್ನ 12.45ರ ಹೊತ್ತಿಗೆ ಬಳ್ಳೆ ವಲಯದಲ್ಲಿ ಸಿಬ್ಬಂದಿಯೊಂದಿಗೆ ಜೀಪಿನಲ್ಲಿ ತೆರಳುತ್ತಿದ್ದಾಗ ಆನೆ ದಾಳಿ ನಡೆಸಿದೆ‌. ಸಿಬ್ಬಂದಿ‌ ಗುಂಡು ಹಾರಿಸಲು‌ ಸಿದ್ಧತೆ ನಡೆಸುತ್ತಿರುವಷ್ಟರಲ್ಲಿ ಮಣಿಕಂಠನ್ ಅವರ ಎದೆಭಾಗ ಹಾಗೂ ತಲೆ ಭಾಗವನ್ನು ಸಲಗ ತುಳಿದು ಹಾಕಿತು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.