ಬೆಂಗಳೂರು : ಕಳೆದ ಎರಡೂವರೆ ದಶಕಗಳಿಂದ ರಂಗತರಬೇತಿ ನಡೆಸುತ್ತಿರುವ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರವು ಮೇ ೧೧ರಿಂದ ೩೧ರವರೆಗೆ ಮೂರು ವಾರಗಳ ರಂಗ ತರಬೇತಿ ಶಿಬಿರ ನಡೆಸುತ್ತಿದ್ದು, ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
೧೮ ರಿಂದ ೩೫ ವರ್ಷದ ಒಳಗಿನ ಎಸ್.ಎಸ್.ಎಲ್.ಸಿ. ವರೆಗೆ ಓದಿದವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ತರಬೇತಿ ನಡೆಸಿಕೊಡಲಿದ್ದು, ರಂಗಮಾಧ್ಯಮದ ಬಗ್ಗೆ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಅಭಿನಯ ವ್ಯಾಯಾಮಕ್ಕೆ ಅಗತ್ಯವಾದ ದೇಹದಾರ್ಢ್ಯತೆ ಇರುವುದು ಅಗತ್ಯ.
ಆಸಕ್ತರು ಏಪ್ರಿಲ್ 20ರೊಳಗೆ ಅರ್ಜಿ ಸಲ್ಲಿಸಬಹುದು. ಅಂತರ್ಜಾಲ ತಾಣ www.ninasam.org ದಲ್ಲಿ ಕೂಡಾ ಅರ್ಜಿ ಸಲ್ಲಿಸಬಹುದು. ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ– ೫೭೭ ೪೧೭. ದೂರವಾಣಿ ಸಂಖ್ಯೆ ೦೮೧೮೩ – ೨೬೫೬೪೬. ಮೊಬೈಲ್ : ಸಿ.ಆರ್. ವಿಶ್ವನಾಥ ಭಟ್ – ೭೭೬೦೮ -೦೯೭೦೦.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.