ADVERTISEMENT

ಫೇಸ್‌ಬುಕ್‌ನಲ್ಲಿ ಪ್ರಧಾನಿಗೆ ಅವಮಾನ: ದೂರು

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ಫೇಸ್‌ಬುಕ್‌ನಲ್ಲಿ ಪ್ರಧಾನಿಗೆ ಅವಮಾನ: ದೂರು
ಫೇಸ್‌ಬುಕ್‌ನಲ್ಲಿ ಪ್ರಧಾನಿಗೆ ಅವಮಾನ: ದೂರು   

ಗಂಗಾವತಿ (ಕೊಪ್ಪಳ ಜಿಲ್ಲೆ):  ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿತ್ರವನ್ನು ವಿರೂಪಗೊಳಿಸಿ ಫೇಸ್‌ಬುಕ್‌ನಲ್ಲಿ ಹಾಕಿದ್ದನ್ನು ಇತರಿಗೆ ಶೇರ್‌ ಮಾಡಿದ ಯುವಕನ ವಿರುದ್ಧ ಬಿಜೆಪಿ ಯುವ ಮುಖಂಡರು ನಗರ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.

ತಾವರಗೇರಾ ಹೋಬಳಿಯ ಗೂಡೂರು ಗ್ರಾಮದ ತಿಪ್ಪನಗೌಡ ಗೂಡೂರು ವಿರುದ್ಧ ಸೈಬರ್ ಅಪರಾಧ  ಪ್ರಕರಣದಡಿ ದೂರು ದಾಖಲಾಗಿದೆ.

ನರೇಂದ್ರ ಮೋದಿ ಅವರು ಸಂಪೂರ್ಣ ನಗ್ನರಾಗಿದ್ದು, ಭತ್ತದ ಸಸಿಗಳನ್ನು ಹಿಡಿದು ಗುಪ್ತಾಂಗವನ್ನು ಮುಚ್ಚಿಕೊಂಡಂತೆ ಚಿತ್ರಿಸಲಾಗಿದೆ.

ADVERTISEMENT

ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ಈ ಚಿತ್ರಕ್ಕೆ ಮಲಯಾಳ ಭಾಷೆಯಲ್ಲಿ ಅಸಹ್ಯಕರವಾದ ಸಂದೇಶ ಬರೆಯಲಾಗಿದೆ. ಈ ಚಿತ್ರವನ್ನು ತಿಪ್ಪನಗೌಡ ಇತರರಿಗೆ ಶೇರ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಆದರೆ, ದೂರು ನೀಡುವ ಮುನ್ನವೇ ತಿಪ್ಪನಗೌಡ ಈ ಚಿತ್ರವನ್ನು ಸ್ಟೇಟಸ್‌ನಿಂದ ತೆಗೆದು ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.