ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2013-14ನೇ ಸಾಲಿನ ಪರಿಷ್ಕೃತ ಬಜೆಟ್‌ನ್ನು ಶುಕ್ರವಾರ ಮಧ್ಯಾಹ್ನ ವಿಧಾನ ಸಭೆಯಲ್ಲಿ ಮಂಡಿಸುತ್ತಿದ್ದಾರೆ.
ಬಿಳಿ ರೇಷ್ಮೆ ಶಾಲಿನಲ್ಲಿ ಮಿರಮಿರನೆ ಮಿಂಚುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರಂಭದಲ್ಲೇ ಹಿಂದಿನ ಸರ್ಕಾರದಿಂದ ಆರ್ಥಿಕ ಸಂಕಷ್ಟ ಬಳುವಳಿಯಾಗಿ ಬಂದಿದೆ ಎಂದು ಬಿಜೆಪಿ ಸರ್ಕಾರದ ಆಡಳಿತವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಒಟ್ಟಾರೆ ಎಲ್ಲಾ ಕ್ಷೇತ್ರದ ಬೆಳವಣಿಗೆ ದರ ಹಿಂದಿನ ಸರ್ಕಾರದ ಅವಧಿಯಲ್ಲಿ ಕುಂಠಿತಗೊಂಡಿದೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ನಂತರ ಇತ್ತೀಚೆಗಷ್ಟೆ ಜಾರಿಯಾದ `ಅನ್ನಭಾಗ್ಯ' ಯೋಜನೆ, ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಸಹಾಯಧನವನ್ನು 2ರೂ ನಿಂದ 4 ರೂಗೆ ಹೆಚ್ಚಿಸಿದ ಕ್ರಮ, ಪರಿಶಿಷ್ಟ, ಹಿಂದುಳಿದ ವರ್ಗದವರ ಸಾಲ ಮನ್ನಾ ಕ್ರಮಗಳನ್ನು ವಿವರಿಸಿ ಕೇವಲ 2 ತಿಂಗಳ ಅವಧಿಯಲ್ಲಿ ತಾವು ಈ ಎಲ್ಲಾ ಕ್ರಮಗಳನ್ನು ಬಡವರ ಏಳಿಗೆಗಾಗಿ ತೆಗೆದುಕೊಂಡಿರುವುದಾಗಿ ಸಮರ್ಥಿಸಿಕೊಂಡರು.
ಇನ್ನಿತರ ಕ್ರಮಗಳು
1. ಕೃಷಿ ಬೆಲೆ ಆಯೋಗ ರಚನೆ
2. ಕನಿಷ್ಠ ಬೆಂಬಲ ಬೆಲೆಯ ಆವರ್ತನಿಧಿಗೆ 1 ಕೋಟಿ ರೂ ಹೆಚ್ಚು ಹಣ ನೀಡಿಕೆ.
3. ಕೃಷಿಕರಿಗೆ 2 ಲಕ್ಷದವರೆಗೆ ಬಡ್ಡಿ ರಹಿತ ಸಾಲ
4. 5 ಹೆಚ್.ಪಿ ಸೋಲಾರ್ ನೀರಾವರಿ ಪಂಪ್‌ಸೆಟ್ ಯೋಜನೆ
5. ಕೃಷಿ-ತೋಟಗಾರಿಕಾ ಕ್ಷೇತ್ರಕ್ಕೆ 4378 ಕೋಟಿ ರೂ
6. ಒಳಾಡಳಿತ- ಸಾರಿಗೆಗೆ 5315 ಕೋಟಿ
7. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್‌ಗೆ 8218 ಕೋಟಿ ರೂ
8. ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕೆ 3466 ಕೋಟಿ
9. ಮೀನುಗಾರಿಕೆ ಹಾಗೂ ಪಶು ಸಂಗೋಪಣೆಗೆ 1903 ಕೋಟಿ ರೂ
10. ಸಮಾಜ ಕಲ್ಯಾಣಕ್ಕೆ 5046 ಕೋಟಿ ರೂ
11. ಡೀಸೆಲ್ ಪ್ರತೀ ಲೀಟರ್ ಗೆ 51 ಪೈಸೆ ಇಳಿಕೆ.
12. ಸಕ್ಕರೆ ಮೇಲಿನ ಸೇವಾ ತೆರಿಗ ಶೇ. 1 ರಷ್ಟು ಇಳಿಕೆ.
13. ರೈತರ ಉತ್ಪನ್ನಗಳಿಗೆ ಉತ್ತೇಜನಕ್ಕೆ 1000 ವರೆಗೆ ಆವರ್ತ ನಿಧಿ.
14. ಜಲಾನಯನ ಅಭೀವೃದ್ಧಿಗೆ 500 ಕೋಟಿ.
15. ಆದಾಯ ಮಿತಿ 36 ಸಾವಿರದಿಂದ 1.2 ಲಕ್ಷಕ್ಕೆ ಏರಿಕೆ.
16. ಕಂದಾಯ ಇಲಾಖೆಯಿಂದ 'ಮನಸ್ವಿನಿ' ಯೋಜನೆಯಡಿ 40 ವರ್ಷ ದಾಟಿದ ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ರೂ. 500 ಮಾಸಾಶನ.
17. ಸಾಮೂಹಿಕ ವಿವಾಹ ನೊಂದಣಿ ಕಡ್ಡಾಯ.
18. ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಪರಮಶಿವಯ್ಯ ವರದಿ ಜಾರಿಗೆ 50 ಕೋಟಿ ಮೀಸಲು.
19. ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ 10
20. ಹಾಲಿನ ಪುಡಿ ಉತ್ಪಾದನೆಗೆ ಮೈಸೂರಿನಲ್ಲಿ ಮೆಗಾ ಡೈರಿ.
21. ಮೈತ್ರಿ ಯೋಜನೆ: ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ 500 ರೂ ನೀಡಿಕೆ
22. ಯಾದಗಿರಿಯಲ್ಲಿ ಟೆಕ್ಸಟೈಲ್ ಪಾರ್ಕ್ ಸ್ಥಾಪನೆ
23. ಚಾಮರಾಜನಗರಲ್ಲಿ ಗ್ರಾನೈಟ್ ಪಾರ್ಕ್ ಸ್ಪಾಪನೆ
24. ನೇಕಾರರ ಕ್ಷೇಮಾಭಿವೃದ್ದಿಗೆ 100 ಕೋಟಿ ರೂ ನೀಡಿಕೆ
25. ಕೆರೆಗಳ ಅಭಿವೃದ್ದಿಗೆ 100 ಕೋಟಿ ರೂ ಮೀಸಲು
26. ಕರಸಮಾಧಾನ ಯೋಜನೆ : ವ್ಯಾಪಾರ ಮತ್ತು ವಾಣಿಜ್ಯೋದ್ಯಮಿಗಳು ಹಳೆಯ ತೆರಿಗೆ ತ್ವರಿತ ಪಾವತಿಗೆ ಹಾಗೂ ತೆರಿಗೆ ಸಂಬಂಧಿತ ವಿವಾದಗಳನ್ನು ಕಡಿಮೆಗೊಳಿಸುವ ಸಲುವಾಗಿ ಈ ಯೋಜನೆ ಜಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.