ADVERTISEMENT

ಬಸ್‌ ಪ್ರಯಾಣ ಶೇ 8ರಷ್ಟು ದುಬಾರಿ?

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST
ಬಸ್‌ ಪ್ರಯಾಣ ಶೇ 8ರಷ್ಟು ದುಬಾರಿ?
ಬಸ್‌ ಪ್ರಯಾಣ ಶೇ 8ರಷ್ಟು ದುಬಾರಿ?   

ಬೆಂಗಳೂರು: ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ವಾಯವ್ಯ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ  ದರವನ್ನು ಒಂದೆರಡು ದಿನಗಳಲ್ಲಿ ಏರಿಸ­ಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.

ಶುಕ್ರವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಎಂ­ಟಿಸಿಯ ಪ್ರಯಾಣ ದರವನ್ನು ಈಗಾಗಲೇ ಶೇ 15ರಷ್ಟು ಏರಿಸಲಾಗಿದೆ. ಕೆಎಸ್‌­ಆರ್‌­ಟಿಸಿ ಮತ್ತು ಇತರ ಎರಡು ಸಂಸ್ಥೆಗಳು ಶೇ 15ರಷ್ಟು ಏರಿಕೆಗೆ ಪ್ರಸ್ತಾ­ವನೆ ಸಲ್ಲಿಸಿದೆ. ಆದರೆ ಶೇ 7– 8 ರಷ್ಟು ಏರಿಕೆ ಆಗಲಿದೆ’ ಎಂದು ಮಾಹಿತಿ ನೀಡಿ­ದರು.

‘ಡೀಸೆಲ್‌ ದರದಲ್ಲಿ ಹೆಚ್ಚಳ ಹಾಗೂ ಸಿಬ್ಬಂದಿಯ ವೇತನ ಪ್ರಮಾಣದ ಹೆಚ್ಚಳ ಕಾರಣದಿಂದ ದರ ಏರಿಕೆ ಅನಿವಾರ್ಯ’ ಎಂದು ಸಮರ್ಥಿಸಿಕೊಂಡರು.

207 ಕೋಟಿ ಹೊರೆ: ಕೆಎಸ್‌ಆರ್‌ಟಿಸಿಗೆ 2013–14ನೇ ಸಾಲಿನಲ್ಲಿ ಡೀಸೆಲ್‌ ದರ ಏರಿಕೆಯಿಂದ ₨105 ಕೋಟಿ ಹಾಗೂ ತುಟ್ಟಿಭತ್ಯೆ ಪಾವತಿಯಿಂದ ₨102 ಕೋಟಿ ಹೆಚ್ಚುವರಿ ಹೊರೆ ಬಿದ್ದಿದೆ. ಮಾರ್ಚ್‌ ಅಂತ್ಯದ ವರೆಗೆ ಸುಮಾರು ₨80 ಕೋಟಿ ನಷ್ಟ ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.