ADVERTISEMENT

ಬೆಳಗಾವಿಯ ಋಷಭ್ ನೀಲಂಗೆ ಬಲಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 19:30 IST
Last Updated 2 ನವೆಂಬರ್ 2012, 19:30 IST

ಬೆಳಗಾವಿ: ತಮಿಳುನಾಡಿನ ಕರಾವಳಿಯಲ್ಲಿ `ನೀಲಂ~ ಚಂಡಮಾರುತಕ್ಕೆ ಸಿಲುಕಿ ಇದೇ 1ರಂದು ನಾಪತ್ತೆಯಾಗಿದ್ದ ತೈಲ ಸಾಗಣೆ ನೌಕೆಯ ಸಿಬ್ಬಂದಿ, ಬೆಳಗಾವಿಯ ಋಷಭ್ ಜಾಧವ (24) ಮೃತಪಟ್ಟಿದ್ದಾರೆ.

ಇಲ್ಲಿನ ಶಹಾಪುರದ ಮಹಾತ್ಮ ಫುಲೆ ರಸ್ತೆಯ ನಿವಾಸಿ ಋಷಭ್ ಒಂದು ತಿಂಗಳ ಹಿಂದೆ ಶಿಪ್ಪಿಂಗ್ ಕಂಪೆನಿಗೆ ಸೇರಿದ್ದರು. ತರಬೇತಿ ಅವಧಿಯಲ್ಲಿದ್ದ ಅವರು ಬಿರುಗಾಳಿಗೆ ಸಿಲುಕಿ ದಡಕ್ಕೆ ಬಂದಿದ್ದ ತೈಲ ಸಾಗಣೆ ನೌಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

 ಜಾಧವ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಅಂತಿಮ ಸಂಸ್ಕಾರಕ್ಕಾಗಿ ಮೃತದೇಹವನ್ನು ನಗರಕ್ಕೆ ಶನಿವಾರ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.