ADVERTISEMENT

ವಕೀಲರ ಪರಿಷತ್‌ ಚುನಾವಣೆ ರದ್ದು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಬೆಂಗಳೂರು: ರಾಜ್ಯ ವಕೀಲರ ಪರಿಷತ್ ಚುನಾವಣೆಯನ್ನು ಭಾರತೀಯ ವಕೀಲರ ಪರಿಷತ್ತಿನ ಚುನಾವಣಾ ನ್ಯಾಯಮಂಡಳಿ ಮಂಗಳವಾರ ರದ್ದುಗೊಳಿಸಿದೆ.

’ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿವೆ’ ಎಂದು ಸ್ಪರ್ಧಿಯೂ ಆದ ಎಚ್.ಆರ್.ದುರ್ಗಾ ಪ್ರಸಾದ್ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮಾರ್ಚ್ 27ರಂದು ವಕೀಲರ ಪರಿಷತ್ತಿನ 25 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಇದರ ಮತ ಎಣಿಕೆಗೆ ನ್ಯಾಯಮಂಡಳಿ ಅಧ್ಯಕ್ಷ ಎಸ್.ಕೆ.ಮುಖರ್ಜಿ ಮಧ್ಯಂತರ ತಡೆ ನೀಡಿದ್ದರು‌.

ADVERTISEMENT

ಸೋಮವಾರವಷ್ಟೇ (ಏ.16) ರಾಜ್ಯ ವಕೀಲರ ಪರಿಷತ್ ವಿಶೇಷ ಸಭೆ ಮತ ಎಣಿಕೆ ನಡೆಸಲು ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.