ADVERTISEMENT

ಶ್ರೀರಾಮುಲುಗೆ ಗಾಳ ಹಾಕಿದ ಎಸಿಬಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 10:15 IST
Last Updated 9 ಆಗಸ್ಟ್ 2012, 10:15 IST

ಬಳ್ಳಾರಿ (ಪಿಟಿಐ): ಜಾಮೀನಿಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರಿಗೆ ಆಂಧ್ರಪದೇಶದ ಭ್ರಷ್ಟಾಚಾರ ನಿಗ್ರಹದಳ ಗುರುವಾರ ಸಮನ್ಸ್ ಜಾರಿಮಾಡಿದೆ . 

ಶ್ರೀ ರಾಮುಲು ಅವರ ನಿವಾಸಕ್ಕೆ ಎಸಿಬಿ ಸಿಬ್ಬಂದಿ ಸಮನ್ಸ್ ಅನ್ನು ತಲುಪಿಸಿದ್ದು ಆ  ಸಮಯದಲ್ಲಿ ಅವರು ಮನೆಯಲ್ಲಿ ಇರಲ್ಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮಧ್ಯೆ ಶ್ರೀರಾಮುಲು ಅವರು  ತಮಗೆ  ನೋಟಿಸ್ ತಲುಪಿಲ್ಲ,  ತಲುಪಿದರೆ ತಾವು ಎಸಿಬಿ ಮುಂದೆ ತನಿಖೆಗೆ  ಹಾಜರಾಗುವುದಾಗಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಸೋಮಶೇಖರ ರೆಡ್ಡಿ ಮತ್ತು ಹೆಚ್.ಟಿ ಸುರೇಶ್ ಬಾಬು ಅವರನ್ನು ಎಸಿಬಿ ಬಂಧಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.