
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಚಿಕಿತ್ಸೆಗಾಗಿ ಬೆಲ್ಜಿಯಂಗೆ ಹೋಗಿರಲಿಲ್ಲ, Tomorrow Land ಅನ್ನೋ ಪಾರ್ಟಿಗೆ ಹೋಗಿದ್ದು, ಅಲ್ಲಿ ಗಲಾಟೆ ಮಾಡಿ ಬೌನ್ಸರ್‍ಗಳ ಬಳಿ ಹೊಡೆತ ತಿಂದ ಪರಿಣಾಮ ಸಾವಿಗೀಡಾಗಿದ್ದಾರೆ. ಡ್ರಗ್ಸ್ ಮಾಫಿಯಾದವರು ಆಯೋಜಿಸುವ ಈ ಕಾರ್ಯಕ್ರಮದಲ್ಲಿ ಹಲವಾರು ಯುವಕ ಯುವತಿಯರು ಭಾಗವಹಿಸುತ್ತಾರೆ. ಈ ಬಾರಿ ರಾಕೇಶ್ ಸಿದ್ಧರಾಮಯ್ಯ ಜತೆ ರೋಹನ್ ಗೌಡ ಹಾಗೂ ಅವನು ಮತ್ತು ಶ್ರಾವಣಿ ಧಾರವಾಹಿಯಲ್ಲಿ ಮೊದಲು ನಾಯಕಿಯಾಗಿ ನಟಿಸುತ್ತಿದ್ದ ನಟಿ ಸೇರಿದಂತೆ ಆರು ಮಂದಿ ಭಾಗವಹಿಸಿದ್ದರು. ಮೊದನ ದಿನದ ಮೋಜಿನ ಕೂಟದಲ್ಲಿ ಭಾಗವಹಿಸಿದ್ಧ ಚಿತ್ರಗಳನ್ನು ಆ ನಟೀಮಣಿ ಫೇಸ್‍ಬುಕ್‍ನಲ್ಲಿ ಹಾಕಿದ್ದು , ರಾಕೇಶ್‍ರನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ದಿಢೀರನೆ ಎಲ್ಲ ಚಿತ್ರಗಳನ್ನು ಡಿಲೀಟ್ ಮಾಡಿ ಫೇಸ್‍ಬುಕ್ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡಿದ್ದಾಳೆ ಎಂಬ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡಿತ್ತು.
ಆದರೆ ರಾಕೇಶ್ ಸಿದ್ಧರಾಮಯ್ಯ ಜತೆಗಿದ್ದಿದ್ದು ನಾನಲ್ಲ ಎಂದು ಅವನು ಮತ್ತು ಶ್ರಾವಣಿ ಧಾರವಾಹಿಯ ನಟಿ ಚೈತ್ರಾ ರೆಡ್ಡಿ ಹೇಳಿದ್ದಾರೆ.
ಫೇಸ್‍ಬುಕ್‍ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಚೈತ್ರಾ, ನಾನು ರಾಕೇಶ್ ಅವರ ಎರಡನೇ ಪತ್ನಿ ಎಂದೂ ಆತನೊಂದಿಗೆ ನಾನು ಬೆಲ್ಜಿಯಂನಲ್ಲಿದ್ದೆ, ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದೆ ಎಂಬ ವದಂತಿಗಳು ಹಬ್ಬುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ರಾಕೇಶ್ ಅವರು 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ನಟಿಯೊಂದಿಗೆ ಇದ್ದರು ಎಂದು ಹಲವಾರು ಪೋಸ್ಟ್ ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ನಟಿಸುವ ನಾಯಕಿ ನಟಿ ನಾನೊಬ್ಬಳೆ. ನಾನು ರಾಕೇಶ್ ಅವರೊಂದಿಗೆ ಬೆಲ್ಜಿಯಂನಲ್ಲಿರಲಿಲ್ಲ. ಆತ ಸಾವಿಗೀಡಾದ ದಿನ ನಾನು ಶೂಟಿಂಗ್‍ನಲ್ಲಿದ್ದೆ. ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವುದು ಸುಳ್ಸುದ್ದಿ ಎಂದು ಸಾಬೀತು ಪಡಿಸುವುದಕ್ಕಾಗಿ ನಾನು ಕೆಲವು ಫೋಟೊಗಳನ್ನು ಇಲ್ಲಿ ಶೇರ್ ಮಾಡುತ್ತಿದ್ದೇನೆ. ನನಗೂ ರಾಕೇಶ್ ಗೂ ಯಾವುದೇ ಸಂಬಂಧವಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಚೈತ್ರಾ ಬರೆದಿದ್ದಾರೆ.
</p></p>
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.