ADVERTISEMENT

16 ಕಂಪನಿಗಳಿಂದ‌ ₹ 1,275 ಕೋಟಿ ಬಂಡವಾಳ ಹೂಡಿಕೆ; ಹೂಡಿಕೆ ಸಮಾವೇಶದಲ್ಲಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 14:29 IST
Last Updated 28 ಅಕ್ಟೋಬರ್ 2022, 14:29 IST
   

ಹುಬ್ಬಳ್ಳಿ: ಧಾರವಾಡದ ಮುಮ್ಮಿಗಟ್ಟಿಯಲ್ಲಿ ಸ್ಥಾಪನೆಯಾಗಲಿರುವ ಎಫ್.ಎಂ.ಸಿ.ಜಿ ಘಟಕದಲ್ಲಿ ಕೈಗಾರಿಕೆ ಸ್ಥಾಪಿಸಲು 16 ಕಂಪನಿಗಳು ಮುಂದೆ ಬಂದಿದ್ದು, ಐದು ವರ್ಷಗಳಲ್ಲಿ ₹1,275 ಕೋಟಿ ಬಂಡವಾಳ ಹೂಡಿಕೆ ಮಾಡಲು ನಿರ್ಧರಿಸಿವೆ.

ಇಲ್ಲಿನ ಡೆನಿಸನ್ಸ್ ಹೋಟೆಲ್'ನಲ್ಲಿ ಶುಕ್ರವಾರ ನಡೆದ ಎಫ್.ಎಂ.ಸಿ.ಜಿ ಕ್ಲಸ್ಟರ್-ಹುಬ್ಬಳ್ಳಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕಂಪನಿಗಳು ರಾಜ್ಯ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡರು.

ಯುಪ್ಲೆಕ್ಸ್ ‌ಲಿ, ಘೋದಾವತ್ ಫುಡ್ ಪ್ರೋ ಪ್ರೈ.ಲಿ. ಅಲ್ಪಾ ಇಂಡಿಯಾ ಪ್ರೈ.ಲಿ., ಜ್ಯೋತಿ ಲ್ಯಾಬ್, ನ್ಯಾಚುರಲ್ ಫುಡ್ಸ್, ಹಾಂಗ್ಯೋ ಸೇರಿದಂತೆ ಮುಂಬೈ, ಬೆಂಗಳೂರು, ಧಾರವಾಡ ಮೂಲದ ಕಂಪನಿಗಳ ಮುಖ್ಯಸ್ಥರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಒಡಂಬಡಿಕೆ ಪತ್ರಗಳಿಗೆ ಸಹಿ ಹಾಕಿದರು. 9,100 ನೇರ ಉದ್ಯೋಗ ಸೃಷ್ಟಿಸುವುದಾಗಿ ಕಂಪನಿಗಳು ತಿಳಿಸಿವೆ.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಸಚಿವ ಶಂಕರಪಾಟೀಲ ಮುನೇನಕೊಪ್ಪ, ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಸಿ.ಎಂ. ಲಿಂಬಣ್ಣವರ, ಅಮೃತ ಇಜಾರಿ, ಉದ್ಯಮಿಗಳಾದ ವಿಜಯ ಸಂಕೇಶ್ವರ, ಟಿ. ಮೋಹನ ಪೈ ಇದ್ದರು.

ಅತಿ ಹೆಚ್ಚು ಬಂಡವಾಳ ಹೂಡಿಕೆ ಮಾಡಿದ ಕಂಪನಿಗಳು
ಕಂಪನಿ; ಬಂಡವಾಳ ಹೂಡಿಕೆ; ಉದ್ಯೋಗ ಸಂಖ್ಯೆ
ಯುಪ್ಲೆಕ್ಸ್ ಲಿ.;
₹500 ಕೋಟಿ; 500 ಉದ್ಯೋಗ
ಗೋದಾವತ್ ಫುಡ್; ₹320 ಕೋಟಿ; 2,500
ಅಲ್ಪಾ ಇಂಡಿಯಾ ಪ್ರೈ; ₹100 ಕೋಟಿ; 300
ವಿಭಯ ಇಂಡಸ್ಟ್ರೀಸ್; ₹50 ಕೋಟಿ; 800
ಜ್ಯೋತಿ ಲ್ಯಾಬ್ಸ್ ಲಿ.; ₹50 ಕೋಟಿ; 600
ರಿವೀನಾ ಫುಡ್ಸ್; ₹50 ಕೋಟಿ; 1,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.