ADVERTISEMENT

ಸೂಳೆಕೆರೆ ಗುಡ್ಡಕ್ಕೆ ಬೆಂಕಿ: 20 ಹೆಕ್ಟೇರ್ ಅರಣ್ಯ ನಾಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 20:32 IST
Last Updated 18 ಫೆಬ್ರುವರಿ 2022, 20:32 IST
ಬಸವಾಪಟ್ಟಣ ಸಮೀಪದ ಸೂಳೆಕೆರೆ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು
ಬಸವಾಪಟ್ಟಣ ಸಮೀಪದ ಸೂಳೆಕೆರೆ ಗುಡ್ಡಕ್ಕೆ ಬೆಂಕಿ ಬಿದ್ದಿರುವುದು   

ಬಸವಾಪಟ್ಟಣ: ಸಮೀಪದ ಸೂಳೆಕೆರೆಯ ಸುತ್ತಲಿನ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕಾರಣ 20 ಹೆಕ್ಟೇರ್‌ ಅರಣ್ಯ ಪ್ರದೇಶ ಸುಟ್ಟುಹೋಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

ಸೂಳೆಕೆರೆಯ ನೂತನ ಪ್ರವಾಸಿ ಮಂದಿರದ ಕಡೆಯಿಂದ ಹತ್ತಿದ ಬೆಂಕಿಯು ಸಿದ್ಧೇಶ್ವರಸ್ವಾಮಿ ದೇಗುಲದವರೆಗೂ ವ್ಯಾಪಿಸಿತ್ತು. ಇಲ್ಲಿ 140 ಎಕರೆ ಪ್ರದೇಶದಲ್ಲಿ ಅರಣ್ಯವಿದೆ. ಚಳಿಗಾಲಕ್ಕೆ ಹುಲ್ಲು ಒಣಗಿ ನಿಂತಿರುತ್ತದೆ. ಇದಕ್ಕೆ ಒಂದು ಕಡೆ ಬೆಂಕಿ ಕಿಡಿ ತಾಗಿದರೂ ಇಡೀ ಪ್ರದೇಶಕ್ಕೆ ಬೆಂಕಿ ಆವರಿಸಿಕೊಳ್ಳುತ್ತದೆ. ಸೂಳೆಕೆರೆ ಗುಡ್ಡದ ಅರಣ್ಯವು ಪ್ರತಿ ವರ್ಷ ಕಿಡಿಗೇಡಿಗಳಿಂದ ಬೆಂಕಿಗೆ ಆಹುತಿ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT