ADVERTISEMENT

ಜಲ ವಿದ್ಯುತ್‌ಗೆ ಶೇ. 20ರಷ್ಟು ಬೇಡಿಕೆ ಇಳಿಕೆ

ಕಾಳಿ ನದಿಯ ವಿವಿಧ ಜಲಾಶಯಗಳಲ್ಲಿ ಸರಾಸರಿ 20 ಕೋಟಿ ಯುನಿಟ್ ಉತ್ಪಾದನೆ

ಸದಾಶಿವ ಎಂ.ಎಸ್‌.
Published 31 ಮಾರ್ಚ್ 2020, 19:30 IST
Last Updated 31 ಮಾರ್ಚ್ 2020, 19:30 IST
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ವಿದ್ಯುತ್ ಉತ್ಪಾದನಾ ಘಟಕದ ನೋಟ
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ವಿದ್ಯುತ್ ಉತ್ಪಾದನಾ ಘಟಕದ ನೋಟ   

ಕಾರವಾರ: ದೇಶದಾದ್ಯಂತ ಲಾಕ್‌ಡೌನ್ ಪರಿಣಾಮ ಕೈಗಾರಿಕೆಗಳೂ ಸೇರಿದಂತೆಬಹುತೇಕಚಟುವಟಿಕೆಗಳುಸ್ಥಗಿತಗೊಂಡಿವೆ. ಇದರ ಪರಿಣಾಮ, ಜಿಲ್ಲೆಯ ಜಲವಿದ್ಯುತ್ ಯೋಜನೆಗಳ ಮೇಲಿನ ಹೊರೆ ಸುಮಾರು ಶೇ 20ರಷ್ಟು ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ‘ಶಕ್ತಿಯುತ ನದಿ’ ಎಂದೇ ಪ್ರಸಿದ್ಧವಾಗಿರುವಕಾಳಿಗೆ ನಿರ್ಮಿಸಲಾಗಿರುವ ನಾಲ್ಕುಅಣೆಕಟ್ಟೆಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ವಿದ್ಯುತ್‌ಗೆ ಬೇಡಿಕೆಕಡಿಮೆಯಾಗಿದೆ.

‘ಪ್ರತಿವರ್ಷ ಮಾರ್ಚ್ ಕೊನೆಯ ವೇಳೆಗೆ ಕಾಳಿ ಜಲ ವಿದ್ಯುತ್ ಯೋಜನೆಯಿಂದ ಪ್ರತಿನಿತ್ಯ ಸರಾಸರಿ 24 ಕೋಟಿ ಯುನಿಟ್ ವಿದ್ಯುತ್‌ಗೆ ಬೇಡಿಕೆ ಇರುತ್ತಿತ್ತು. ಈಗ 20 ಕೋಟಿ ಯುನಿಟ್‌ಗಳ ಆಸುಪಾಸಿನಲ್ಲಿ ಉತ್ಪಾದಿಸಲಾಗುತ್ತಿದೆ’ ಎಂದು ಯೋಜನೆಯ ಮುಖ್ಯ ಎಂಜಿನಿಯರ್ ಕೆ.ನಂಜುಂಡೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸೂಪಾ ಜಲಾಶಯದಲ್ಲಿ ಸೋಮವಾರ 2.30 ಕೋಟಿ,ನಾಗಝರಿ ಜಲಾಶಯದಲ್ಲಿ14 ಕೋಟಿ, ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಲ್ಲಿ ತಲಾ 3 ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ.ಅಗತ್ಯವಿದ್ದರೆ ಇನ್ನಷ್ಟು ವಿದ್ಯುತ್ ಉತ್ಪಾದನೆಗೆ ಎಲ್ಲ ಘಟಕಗಳೂಸಮರ್ಥವಾಗಿವೆ. ಆದರೆ, ಬೇಡಿಕೆಯಿಲ್ಲದ ಕಾರಣಉತ್ಪಾದನೆ ಕಡಿಮೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಭಾರಿ ಮಳೆಯಾದ ಕಾರಣ ಎಲ್ಲ ಜಲಾಶಯಗಳೂ ಭರ್ತಿಯಾಗಿದ್ದವು.ಲಾಕ್‌ಡೌನ್ ಪರಿಣಾಮ ದೇಶದಾದ್ಯಂತ ಕೈಗಾರಿಕೆಗಳು, ಮಾಲ್‌ಗಳು, ಚಲನಚಿತ್ರ ಮಂದಿರಗಳು ಸೇರಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಿವೆ. ಉಳಿದಂತೆ, ಕೃಷಿ ಮತ್ತು ಗೃಹ ಬಳಕೆಗೆ ಮಾತ್ರ ಈಗ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಇದರಿಂದ ನೀರು ಉಳಿತಾಯವಾಗಿ ಈ ವರ್ಷ ಬೇಸಿಗೆಯಲ್ಲಿ ಜಲವಿದ್ಯುತ್ ಯೋಜನೆಗೆ ನೀರಿನ ಕೊರತೆ ಎದುರಾಗದು ಎಂಬ ಲೆಕ್ಕಚಾರವೂ ಅಧಿಕಾರಿಗಳದ್ದಾಗಿದೆ.

‘ಶೇ 50ರಷ್ಟು ಸಿಬ್ಬಂದಿ ಕೆಲಸ’:‘ವಿದ್ಯುತ್ ಜೀವನೋಪಾಯಕ್ಕೆ ಅತ್ಯಗತ್ಯ. ಅದರ ಉತ್ಪಾದನೆಯುಕೊರೊನಾ ವೈರಸ್ಪರಿಣಾಮದಿಂದ ನಿಂತಿಲ್ಲ. ಎರಡು ತಂಡಗಳಲ್ಲಿ ಶೇ 50ರಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ.ಎಲ್ಲರಿಗೂ ಮುಖಗವಸು, ಸ್ಯಾನಿಟೈಸರ್ ನೀಡಲಾಗಿದ್ದು, ಕಡ್ಡಾಯವಾಗಿ ಬಳಕೆ ಮಾಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ’ ಎಂದು ಕೆ.ನಂಜುಂಡೇಶ್ವರ ಹೇಳಿದರು.

‘ಸಿಬ್ಬಂದಿಯ ಸುರಕ್ಷತೆಗೆ ಕಾಳಿ ನದಿಯ ವಿವಿಧ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಸ್ಥಳೀಯವಾಗಿ ಪರಿಶೀಲನಾ ಸಮಿತಿಗಳನ್ನು ರಚಿಸಲಾಗಿದೆ. ಎರಡು ದಿನಗಳಿಗೆ ಒಮ್ಮೆ ಅವಲೋಕಿಸಿ, ಅಗತ್ಯವಾದ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.