ADVERTISEMENT

ಎರಡು ದಿನದಲ್ಲಿ ಮೂರು ಮಂಗಗಳ ಸಾವು

ಅಂಗಾಂಗಗಳು ಪ್ರಯೋಗಾಲಯಕ್ಕೆ ರವಾನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:40 IST
Last Updated 7 ಫೆಬ್ರುವರಿ 2019, 19:40 IST
ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದಲ್ಲಿ ಸತ್ತಿರುವ ಮಂಗಗಳನ್ನು ಪರಿಶೀಲಿಸುತ್ತಿರುವ ಅರಣ್ಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ
ಅಂಕೋಲಾ ತಾಲ್ಲೂಕಿನ ಅವರ್ಸಾ ಗ್ರಾಮದಲ್ಲಿ ಸತ್ತಿರುವ ಮಂಗಗಳನ್ನು ಪರಿಶೀಲಿಸುತ್ತಿರುವ ಅರಣ್ಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ   

ಅಂಕೋಲಾ: ತಾಲ್ಲೂಕಿನ ಅವರ್ಸಾ ಗ್ರಾಮದಲ್ಲಿ ಎರಡು ದಿನಗಳಲ್ಲಿ ಮೂರು ಮಂಗಗಳು ಸತ್ತಿರುವುದು ಸ್ಥಳೀಯರಲ್ಲಿ ಆಂತಕಕ್ಕೆ ಕಾರಣವಾಗಿದೆ.

ಗುರುವಾರ ಒಂದು ಮಂಗ ಸತ್ತಿದೆ. ಬುಧವಾರ ಮೃತಪಟ್ಟಿದ್ದ ಎರಡು ಮಂಗಗಳನ್ನು ನಾಯಿಗಳು ಎಳೆದಾಡಿ, ತಲೆಯ ಭಾಗ ಕಚ್ಚಿ ತಿಂದಿವೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಪರಿಶೀಲನೆ ನಡೆಸಿದ್ದಾರೆ.

‘ಮಂಗಗಳ ದೇಹದ ಭಾಗಗಳನ್ನು ಹೊನ್ನಾವರದ ಕೆಎಫ್‌ಡಿ ನಿಯಂತ್ರಣ ಘಟಕಕ್ಕೆಕಳುಹಿಸಲಾಗಿದೆ.ಅಲ್ಲಿಂದ ಶಿವಮೊಗ್ಗದ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗುತ್ತದೆ. ವರದಿ ಬಂದ ನಂತರವೇ ಮಂಗಗಳ ಸಾವಿಗೆ ಕಾರಣ ತಿಳಿಯಲಿದೆ. ಮಂಗಗಳು ಸತ್ತ ಪ್ರದೇಶಗಳ ಸುತ್ತಮುತ್ತ ಶುಕ್ರವಾರ ತೆರಳಿ, ಜ್ವರ ಇದ್ದವರ ಬಗ್ಗೆ ಮಾಹಿತಿ ಪಡೆಯಲಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅರ್ಚನಾ ನಾಯಕ ತಿಳಿಸಿದ್ದಾರೆ.

ADVERTISEMENT

‘ಜನವರಿ ತಿಂಗಳಲ್ಲಿ ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಮಂಗಗಳು ಸತ್ತಿದ್ದವು. ಅದರಲ್ಲಿ ವಡಗಾರದಲ್ಲಿ ಎರಡು ಮಂಗಗಳು ವಿದ್ಯುತ್ ಸ್ಪರ್ಶದಿಂದ ಸತ್ತಿರುವುದು ದೃಢಪಟ್ಟಿತ್ತು. ಹಳವಳ್ಳಿ ಹಾಗೂ ಪೂಜಗೇರಿಯಲ್ಲಿ ನಾಯಿ ದಾಳಿಯಿಂದ ಎರಡು ಮಂಗಗಳು ಸತ್ತಿದ್ದವು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.