ADVERTISEMENT

ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳಿಗೆ ಶೇ 50 ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 18:31 IST
Last Updated 2 ನವೆಂಬರ್ 2020, 18:31 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರಕಟವಾಗಿರುವ ಎಲ್ಲ ಪುಸ್ತಕಗಳನ್ನು ಕನ್ನಡ ರಾಜೋತ್ಸವದ ಅಂಗವಾಗಿ ಶೇ 50ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ನವೆಂಬರ್ ಅಂತ್ಯದವರೆಗೆ ಈ ರಿಯಾಯಿತಿ ಇರಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಎಲ್ಲ ಜಿಲ್ಲಾ ಕಚೇರಿಗಳು, ಪ್ರಾಧಿಕಾರದ ಎಲ್ಲ ಪುಸ್ತಕ ಮಾರಾಟ
ಮಳಿಗೆಗಳು, ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ಹಾಗೂ ಎಲ್ಲ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಪುಸ್ತಕಗಳನ್ನು ಖರೀದಿಸಬಹುದು.

ಆನ್‍ಲೈನ್ ಮೂಲಕ ಪುಸ್ತಕ ಖರೀದಿಸಲು www.kannadapustakapradhikara.com ಅನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಸಂಪರ್ಕ:08022484516

ನ.30ರವರೆಗೆ ರಿಯಾಯಿತಿ

ಬೆಂಗಳೂರು: ನವಕರ್ನಾಟಕ ಪ್ರಕಾಶನದ 60ನೇ ವಸಂತ ಹಾಗೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಕಾಶನದ ಎಲ್ಲ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ನ.30ರವರೆಗೆ ಶೇ 50ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ.

ಬೆಂಗಳೂರಿನ ಕೆ.ಜಿ.ರಸ್ತೆ, ಕ್ರೆಸೆಂಟ್ ರಸ್ತೆ, ಮೈಸೂರಿನ ರಾಮಸ್ವಾಮಿ ವೃತ್ತ, ಮಂಗಳೂರಿನ ಕೆ.ಎಸ್.ರಾವ್ ರಸ್ತೆ ಹಾಗೂ ಜ್ಯೋತಿ ವೃತ್ತ, ಕಲಬುರ್ಗಿ ಮಿನಿವಿಧಾನಸೌಧ ಬಳಿ ಇರುವ ಪ್ರಕಾಶನದ ಮಳಿಗೆಗಳಲ್ಲಿ ಈ ರಿಯಾಯಿತಿ ಲಭ್ಯ.

ಆನ್‍ಲೈನ್ ಮೂಲಕ ಪುಸ್ತಕ ಖರೀದಿಸಲು www.navakarnataka.com ಅನ್ನು ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.