ADVERTISEMENT

ಪೋಲಿಯೊ ಹನಿ ಪಡೆದ 65.36 ಲಕ್ಷ ಮಕ್ಕಳು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 20:18 IST
Last Updated 3 ಫೆಬ್ರುವರಿ 2021, 20:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಆರೋಗ್ಯ ಇಲಾಖೆಯು ಹಮ್ಮಿಕೊಂಡಿದ್ದ ಪಲ್ಸ್‌ ಪೋಲಿಯೊ ಲಸಿಕೆ ವಿತರಣೆ ಅಭಿಯಾನವು ಬುಧವಾರ ಸಂಪನ್ನವಾಗಿದ್ದು, 4 ದಿನಗಳ ಅವಧಿಯಲ್ಲಿ 5 ವರ್ಷದೊಳಗಿನ 65.36 ಲಕ್ಷ ಮಕ್ಕಳು ಪೋಲಿಯೊ ಹನಿ ಹಾಕಿಸಿಕೊಂಡಿದ್ದಾರೆ.

ಇಲಾಖೆಯು ಈ ಬಾರಿ 64.07 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿತ್ತು. ಭಾನುವಾರ 57,98,611 ಮಕ್ಕಳು ಲಸಿಕೆ ಪಡೆದುಕೊಂಡಿದ್ದರು. ನಾನಾ ಕಾರಣಗಳಿಂದ ಗೈರಾದವರು ಹಾಗೂ ಬಿಟ್ಟು ಹೋದವರಿಗೆ ಲಸಿಕೆ ಹಾಕಲು ಇಲಾಖೆಯು ಫೆ.3ರವರೆಗೆ ವ್ಯವಸ್ಥೆ ಮಾಡಿತ್ತು. ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯದ ಮಕ್ಕಳ ಮನೆಗೆ ತೆರಳಿ, ಪೋಲಿಯೊ ಹನಿ ಹಾಕಿದ್ದಾರೆ. ಇದರಿಂದಾಗಿ ಶೇ 100ರಷ್ಟು ಗುರಿ ಸಾಧನೆ ಸಾಕಾರವಾಗಿದೆ.

ಉಡುಪಿ, ಉತ್ತರ ಕನ್ನಡ, ಕೊಡಗು, ಮಂಡ್ಯ ಸೇರಿದಂತೆ 21 ಜಿಲ್ಲೆಗಳಲ್ಲಿ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.