ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಸ್ತ್‌ವಾರ್ ಜಿಲ್ಲೆಯಲ್ಲಿ 7 ವರ್ಷದ ಮಗುವೊಂದು ಹಿಮದಡಿ ಜೀವಂತ ಸಿಲುಕಿ ಮೃತಪಟ್ಟಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ವ ಪ್ರದೇಶದ ತಿಲಾರ್ ಎಂಬ ಹಳ್ಳಿಯ ನಿವಾಸಿ, ಮೃತ ಮಗುವಿನ ತಂದೆ ಬಶೀರ್ ಅಹ್ಮದ್ ಅವರು 'ಸೋಮವಾರ ಸಂಜೆಯಿಂದ ಮಗುಕಣ್ಮರೆಯಾಗಿತ್ತು' ಎಂದುಹೇಳಿದ್ದಾರೆ.
'ಮಗು ಮನೆಯಿಂದ ಹೊರಗೆ ಆಟವಾಡುತ್ತಿದ್ದ ಸಂದರ್ಭ ಮನೆಯ ಮೇಲ್ಚಾವಣಿಯಿಂದ ಹಿಮದರಾಶಿ ಸುರಿದಿದೆ. ಇದರಿಂದ ಮಗು ಹಿಮದಡಿ ಸಿಲುಕಿಕೊಂಡಿದೆ' ಎಂದು ಡಿಸಿ ಅಶೋಕ್ ಕುಮಾರ್ ಶರ್ಮ ತಿಳಿಸಿದ್ದಾರೆ. ಮಗುವಿನ ಮೃತ ದೇಹವು ಮನೆಯ ಸಮೀಪವೇ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.