ADVERTISEMENT

ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ಹಾಲು ಕರೆಯಲಾಗದು: ವಕೀಲರಿಗೆ ನಾಗಪ್ರಸನ್ನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 16:37 IST
Last Updated 10 ಡಿಸೆಂಬರ್ 2024, 16:37 IST
ನ್ಯಾಯಮೂರ್ತಿ ಎಂ.ನಾಗಪ್ರಸನ್ನ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ   

ಬೆಂಗಳೂರು: ‘ಕಳೆದ 29 ದಿನಗಳಲ್ಲಿ 7,500 ಮೆಮೊಗಳ (ಜ್ಞಾಪನಾ ಪತ್ರ) ಪೈಕಿ 5,500 ಮೆಮೊಗಳನ್ನು ವಿಚಾರಣೆಗೆ ಪಟ್ಟಿ ಮಾಡಿದ್ದೇನೆ. ಇನ್ನೂ ಎಷ್ಟು ಮೆಮೊಗಳನ್ನು ಸ್ವೀಕರಿಸಲಿ? ನಾನೂ ಮನುಷ್ಯ. ಹಸುವಿನ ಕೆಚ್ಚಲಿನಲ್ಲಿ ರಕ್ತ ಬರುವವರೆಗೆ ಹಾಲು ಕರೆಯಲಾಗದು...‘

ಮಂಗಳವಾರ ಬೆಳಿಗ್ಗೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠದ ಮುಂದೆ ವಕೀಲರೊಬ್ಬರು ದಾವೆ ಇತ್ಯರ್ಥಕ್ಕೆ ಸಂಬಂಧಿಸಿದ ತುರ್ತು ಅರ್ಜಿಯೊಂದನ್ನು ವಿಚಾರಣೆಗೆ ಪರಿಗಣಿಸುವಂತೆ ಕೋರಿದರು.

‘ಹಲವು ಬಾರಿ ಮೆಮೊ ಸಲ್ಲಿಸಿದ್ದೇನೆ. ಪ್ರಕರಣ ಇನ್ನೂ ವಿಚಾರಣೆಗೆ ನಿಗದಿಯಾಗಿಲ್ಲ. ಈ ಬಾರಿ ಪರಿಗಣಿಸಬೇಕು’ ಎಂದು ನ್ಯಾಯಮೂರ್ತಿಗಳಿಗೆ ಮೆಮೊ ನೀಡಲು ಮುಂದಾದರು. ಈ ಹೊತ್ತಿಗಾಗಲೇ ಸಾಕಷ್ಟು ಮೆಮೊಗಳನ್ನು ಸ್ವೀಕರಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಕೀಲರ ಮನವಿಗೆ ಬೇಸರ ಹೊರಹಾಕಿದರು.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.