ADVERTISEMENT

ಪಿಯುಸಿ ಫಲಿತಾಂಶ: ‘ಪ್ರಜಾವಾಣಿ’ ಸ್ಕಾಲರ್‌ಶಿಪ್‌ ಪಡೆದ ವಿದ್ಯಾರ್ಥಿಗೆ ಶೇ.97 ಅಂಕ 

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:33 IST
Last Updated 14 ಜುಲೈ 2020, 17:33 IST
ಚಂದ್ರಶೇಖರ್ 
ಚಂದ್ರಶೇಖರ್    

ಬೆಂಗಳೂರು: ಎಸ್‌ಎಸ್‌ಎಲ್‌ಸಿಯಲ್ಲಿ ಶೇ 97.28ರಷ್ಟು ಅಂಕ ಗಳಿಸಿದ್ದಕ್ಕೆ ‘ಪ್ರಜಾವಾಣಿ’ಯಿಂದ ವಿದ್ಯಾರ್ಥಿ ವೇತನ ಪಡೆದಿದ್ದ ವಿದ್ಯಾರ್ಥಿಯೊಬ್ಬರು, ಪಿಯುಸಿಯಲ್ಲಿಯೂ ಶೇ 97.66ರಷ್ಟು ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು ಉತ್ತರ ಜಿಲ್ಲೆ ಅರಿಷಿಣಗುಂಟೆಯ ಬಿಜಿಎಸ್‌ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಎಸ್. ಚಂದ್ರಶೇಖರ್‌ ವಿಜ್ಞಾನ ವಿಭಾಗದಲ್ಲಿ 586 ಅಂಕಗಳನ್ನು ಗಳಿಸಿದ್ದಾರೆ. ಗಣಿತ, ಭೌತವಿಜ್ಞಾನ, ರಾಸಾಯನಿಕ ವಿಜ್ಞಾನದಲ್ಲಿ ತಲಾ 99 ಅಂಕ ಪಡೆದಿದ್ದಾರೆ.

‘ಅಪ್ಪ–ಅಮ್ಮ ತಳ್ಳುಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ. ಮನೆಯಲ್ಲಿ ಬಡತನವಿದೆ. ಎಸ್‌ಎಸ್ಎಲ್‌ಸಿ ನಂತರ ‘ಪ್ರಜಾವಾಣಿ’ಯಿಂದ ಸಿಕ್ಕ ನೆರವಿನಿಂದ ಪುಸ್ತಕಗಳನ್ನು ಖರೀದಿಸಿದ್ದೆ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯಬೇಕು ಎಂಬ ಹಂಬಲವಿದೆ. ಯಾರಾದರೂ ಆರ್ಥಿಕ ನೆರವು ನೀಡಿದರೆ ಸಹಾಯವಾಗುತ್ತದೆ’ ಎಂದು ಚಂದ್ರಶೇಖರ್‌ ಮನವಿ ಮಾಡಿದರು.

ADVERTISEMENT

ಹಾಸನ ಜಿಲ್ಲೆ ಶ್ರವಣಬೆಳಗೊಳದ ಕುಂಭೇನಹಳ್ಳಿಯವರಾದ ಚಂದ್ರಶೇಖರ್ ಸದ್ಯ ಊರಿನಲ್ಲಿಯೇ ಕೃಷಿ ಕೆಲಸ ಮಾಡುತ್ತಿದ್ದಾರೆ.

ಸಂಪರ್ಕಕ್ಕೆ: 81508–84492.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.