ADVERTISEMENT

ಅನರ್ಹರಿಗೆ ಮಣೆ ಹಾಕಿದ್ದೀರಿ... 'ಮಾಡಿದ್ದುಣ್ಣೊ ಮಾರಾಯ': ಪ್ರಕಾಶ್ ರಾಜ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 11:08 IST
Last Updated 9 ಡಿಸೆಂಬರ್ 2019, 11:08 IST
   

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಹುತೇಕ ಎಲ್ಲ ಅನರ್ಹ ಶಾಸಕರಿಗೂ ಮತದಾರರೂ ಅರ್ಹರ ಮುದ್ರೆ ಒತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನಟ ಪ್ರಕಾಶ್ ರಾಜ್ ಕರ್ನಾಟಕಕ್ಕೆ ಶುಭಾಶಯ ಕೋರಿದ್ದಾರೆ.

ಉಪಚುನಾವಣೆಯ ಫಲಿತಾಂಶವು ಪ್ರಕಟಗೊಂಡಿದ್ದು, ಕರ್ನಾಟಕಕ್ಕೆ ಶುಭಾಶಯಗಳು. ಬೆನ್ನಿಗೆ ಚೂರಿ ಹಾಕಿದ್ದವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅದು ಮತ್ತೆ ಸಂಭವಿಸುವುದಿಲ್ಲ ಎಂದು ಭಾವಿಸುತ್ತೇನೆ. ಅನರ್ಹರಿಗೆ ಮಣೆ ಹಾಕಿದ್ದೀರಿ... ಒಳಿತಾಗಲಿ... 'ಮಾಡಿದ್ದುಣ್ಣೊ ಮಾರಾಯ' ಈ ಮಾತು ಯಾರಿಗೆ ಅನ್ವಯಿಸುತ್ತೊ ಕಾದು ನೊಡೋಣ. .#JustAsking ಎಂಬ ಹ್ಯಾಷ್‌ಟ್ಯಾಗ್ ಹಾಕಿ ಬರೆದುಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಕಾಶ್ ರಾಜ್‌ ಸೋಲನ್ನನುಭವಿಸಿದ್ದರು.

ADVERTISEMENT

ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುವ ನಟ ಪ್ರಕಾಶ್ ರಾಜ್, ಚುನಾವಣೆಯಲ್ಲಿನ ಸೋಲು ನನ್ನ ಮುಖಕ್ಕೆ ಸಿಕ್ಕಿದ ಪ್ರಖರ ಹೊಡೆತ, ಮತ್ತಷ್ಟು ಅವಮಾನಿತ, ಟ್ರೋಲ್ ಮತ್ತು ತೇಜೋವಧೆಗೊಳಗಾಗಲಿದ್ದೇನೆ ಎಂದು ತಿಳಿದಿದೆ. ನಾನು ನನ್ನ ನಿಲುವಿನಲ್ಲಿ ದೃಢವಾಗಿದ್ದೇನೆ. ಜಾತ್ಯಾತೀತ ಭಾರತಕ್ಕಾಗಿರುವ ನನ್ನ ಹೋರಾಟ ಮುಂದುವರಿಯಲಿದೆ. ಕಠಿಣ ಪಯಣ ಈಗಷ್ಟೇ ಶುರುವಾಗಲಿದೆ. ಈ ಪಯಣದಲ್ಲಿ ನನ್ನೊಂದಿಗೆ ಇದ್ದವರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.