ಬೆಂಗಳೂರು: ಸದಾಶಿವನಗರದ ಎಸ್.ಎಂ. ಕೃಷ್ಣ ಅವರ ಮನೆಯಂಗಳದಲ್ಲಿ ರಾಜಕಾರಣಿಗಳು, ಚಿತ್ರರಂಗದ ಕಲಾವಿದರು ಕೃಷ್ಣ ಅವರ ಅಂತಿಮ ದರ್ಶನ ಪಡೆದರು.
ಮಂಗಳವಾರ ಮುಂಜಾನೆಯಿಂದಲೂ ಕೃಷ್ಣ ಅವರ ನಿವಾಸಕ್ಕೆ ಜನರು ಬರತೊಡಗಿದ್ದರು. ಸದಾಶಿವನಗರ, ಮಲ್ಲೇಶ್ವರದ ಸುತ್ತಮುತ್ತಲ ನಿವಾಸಿಗಳು ಅಂತಿಮ ದರ್ಶನ ಪಡೆದರು.
ನಟಿ ರಮ್ಯಾ ಅವರು ಬೆಳಿಗ್ಗೆಯೇ ದರ್ಶನ ಪಡೆದರು. ಪಕ್ಕದ ನಿವಾಸಿಗಳಾದ ಅಶ್ವಿನಿ ಪುನೀತ್ ರಾಜಕುಮಾರ್, ಯುವ ರಾಜಕುಮಾರ ಬಂದು ಅಂತಿಮ ನಮನ ಸಲ್ಲಿಸಿದರು.
‘ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿದ್ದರು. ಅತ್ಯಾಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದರು. ವೀರಪ್ಪನ್ ನಮ್ಮ ತಂದೆಯವರನ್ನು ಅಪಹರಿಸಿದ್ದಾಗ ಅವರು ಮಾಡಿದ್ದ ಸಹಾಯವನ್ನು ಮರೆಯಲು ಸಾಧ್ಯ ಇಲ್ಲ. ವಯಸ್ಸು ಎಷ್ಟೇ ಆಗಿದ್ದರೂ ನಷ್ಟ ನಷ್ಟವೇ. ಅದನ್ನು ಭರಿಸಲು ಸಾಧ್ಯ ಇಲ್ಲ. 92 ವರ್ಷದ ಅವರ ಜೀವನ ಸಾರ್ಥಕವಾಗಿದೆ. ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾಥಿಸುತ್ತೇನೆ’ ಎಂದು ನಟ ಶಿವರಾಜ್ ಕುಮಾರ ಹೇಳಿದರು.
ಬೆಳಗಾವಿಯಿಂದ ವಿಮಾನದಲ್ಲಿ ದೇವನಹಳ್ಳಿಗೆ ಬಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಸದಾಶಿವ ನಗರಕ್ಕೆ ಬಂದು ಕೃಷ್ಣ ಅವರ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರದ ಮೇಲಿರಿಸಿದ್ದ ಗಾಜಿನ ಹೊದಿಕೆಯನ್ನು ತೆಗೆದು ಹೂವಿನ ಹಾರ ಹಾಕಿ, ಕಾಲಿಗೆ ನಮಸ್ಕರಿಸಿ ಕಣ್ಣೀರಾದರು. ಮನೆಯೊಳಗೆ ತೆರಳಿ ಅಂತಿಮ ಸಂಸ್ಕಾರದ ಬಗ್ಗೆ ಕುಟಿಂಬದವರೊಂದಿಗೆ ಚರ್ಚಿಸಿದರು. ಸರ್ಕಾರಿ ಗೌರವಗಳೊಂದಿಗೆ ಬುಧವಾರ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿ ಮದ್ದೂರಿಗೆ ಪ್ರಯಾಣಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕ್ರಿಕೆಟಿಗ ಅನಿಲ್ ಕುಂಬ್ಳೆ ಅಂತಿಮ ದರ್ಶನ ಪಡೆದರು.
ಕನ್ನಡ ಪರ ಹೋರಾಟಗಾರ ಅವರು ಮಾತನಾಡಿ, ಎಸ್.ಎಂ. ಕೃಷ್ಣ ಅವರೊಂದಿಗೆ ಕೆಲಸ ಮಾಡಿದ ಸಂದರ್ಭವನ್ನು ಸ್ಮರಿಸಿಕೊಂಡರು. ಒಳ್ಳೆಯ, ಅದ್ಭುತ ಮಾತುಗಾರ, ಅತ್ಯಂತ ಗಾಂಭೀರ್ಯ ರಾಜಕಾರಣಿ ಕೃಷ್ಣ ಅವರು, ಅತ್ಯಂತ ಸುಧಾರ ಉಡುಪು ಹಾಕುತ್ತಿದ್ದರು ಎಂದರು.
ಬೆಂಗಳೂರಿನಲ್ಲಿ ಐಟಿ ಬಿಟಿ ಅಭಿವೃದ್ಧಿ, ವಿಕಾಸ ಸೌಧ ನಿರ್ಮಾಣ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೈವೇ ನಿರ್ಮಾಣ ಮಾಡಿದವರು ಕೃಷ್ಣ. ನಂಜುಂಡಪ್ಪ ಅವರ ಸಮಿತಿ ರಚನೆ ಸೇರಿದಂತೆ ಹಲವು ಗಣನೀಯ ಕೆಲಸ ಮಾಡಿದ್ದಾರೆ. ಸುಮಾರು 2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.