ADVERTISEMENT

ಮರಳು ಗಣಿಗಾರಿಕೆಗೆ ಪಾರದರ್ಶಕ ವಿಧಾನ ಆಯ್ಕೆ: ಉಡುಪಿ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 16:09 IST
Last Updated 21 ನವೆಂಬರ್ 2021, 16:09 IST
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ   

ನವದೆಹಲಿ: ಉಡುಪಿ ಜಿಲ್ಲಾಡಳಿತವು ಮರಳು ಗಣಿಗಾರಿಕೆ ಮತ್ತು ಮರಳು ಮಾರಾಟದ ವೇಳೆ ಪಾರದರ್ಶಕ ವಿಧಾನವನ್ನು ಅನುಸರಿಸಿದೆ ಎಂದು ರಾಜ್ಯ ಸರ್ಕಾರವುರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ತಿಳಿಸಿದೆ.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗನುಸಾರ ಮರಳು ಗಣಿಗಾರಿಕೆಯನ್ನು ನಡೆಸಲಾಗಿದೆ ಎಂದು ಎನ್‌ಜಿಟಿಯ ದಕ್ಷಿಣ ಪೀಠಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಜಿಲ್ಲಾಡಳಿತವು ಹೇಳಿದೆ.

ಉಡುಪಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.

ADVERTISEMENT

‘ಏಳು ಸದಸ್ಯರನ್ನು ಒಳಗೊಂಡ ಉಡುಪಿ ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಮರಳು ಗಣಿಗಾರಿಕೆ ವೇಳೆ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಸಮಿತಿಯುವೈಜ್ಞಾನಿಕ ಮತ್ತು ಪಾರದರ್ಶಕ ವಿಧಾನವನ್ನು ಆಯ್ಕೆ ಮಾಡಿದೆ’ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.