ADVERTISEMENT

ರಾಜ್ಯದಲ್ಲಿ 1,600 ವೈದ್ಯಕೀಯ ಸೀಟು ಹೆಚ್ಚಳಕ್ಕೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 15:34 IST
Last Updated 22 ಜನವರಿ 2025, 15:34 IST
<div class="paragraphs"><p>ವೈದ್ಯಕೀಯ ಸೀಟು</p></div>

ವೈದ್ಯಕೀಯ ಸೀಟು

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1,600 ಸೀಟು ಹೆಚ್ಚಳಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಮ್ಮತಿ ನೀಡಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೂ ಪ್ರಸ್ತಾವ ಸಲ್ಲಿಸಿದೆ.

ADVERTISEMENT

ರಾಜ್ಯದ ಎಂಟು ಖಾಸಗಿ ಮತ್ತು 16 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹೆಚ್ಚಿಸಲು ಸ್ಥಳೀಯ ತಪಾಸಣಾ ಸಮಿತಿಗಳು (ಎಲ್‌ಐಸಿ) ಶಿಫಾರಸು ಮಾಡಿದ್ದವು. ಈ ಶಿಫಾರಸಿನಲ್ಲಿ ರಾಮನಗರ, ಹುಣಸೂರು ಹಾಗೂ ಕನಕಪುರ ಹೊಸ ಕಾಲೇಜುಗಳೂ ಸೇರಿವೆ. ಪ್ರಸ್ತುತ ರಾಜ್ಯದ ಕಾಲೆಜುಗಳಲ್ಲಿ 11,500 ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಸೀಟು ಹೆಚ್ಚಳವಾದರೆ 13,100 ಸೀಟು ದೊರೆಯಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.