
ಪ್ರಜಾವಾಣಿ ವಾರ್ತೆ
ಆಳಂದ (ಕಲಬುರಗಿ ಜಿಲ್ಲೆ): ಪುರಸಭೆ ಅಧ್ಯಕ್ಷ ಫಿರ್ದೋಸ್ ಆರೀಫ್ ಅನ್ಸಾರಿ ಅವರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ. ಅನ್ಸಾರಿ ಆಳಂದದ ವಾರ್ಡ್ ನಂ.13ರ ಸದಸ್ಯರಾಗಿ ಆಯ್ಕೆಯಾಗಿದ್ದರು.
‘ಪುರಸಭೆ ಸಭೆಗಳಿಗೆ ಸತತ ಗೈರು ಹಾಜರಾಗಿ ಪೌರಸಭೆಗಳ ಅಧಿನಿಯಮ 1964ರ ಕಲಂ 16(2)(ಸಿ) ಉಲ್ಲಂಘಿಸಿದ್ದು, ಸದಸ್ಯತ್ವ ರದ್ದಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಆಳಂದ ಪಟ್ಟಣದಲ್ಲಿ ಶಿವರಾತ್ರಿ ವೇಳೆ ನಡೆದಿದ್ದ ಗಲಭೆ ಸೇರಿ ಹಲವು ಪ್ರಕರಣಗಳು ಫಿರ್ದೋಸ್ ಆರೀಫ್ ಅನ್ಸಾರಿ ಅವರ ಮೇಲಿವೆ. ಒಮ್ಮೆ ಜಿಲ್ಲೆಯಿಂದ ಗಡಿಪಾರು ಆಗಿದ್ದರು. ಜೈಲು ಶಿಕ್ಷೆ ಅನುಭವಿಸಿದ್ದರು. ಸತತ ಐದು ಸಭೆಗಳಿಗೆ ಗೈರು ಹಾಜರಾಗಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.