ADVERTISEMENT

ಅಂಬರೀಷ್‌ ಅಂತ್ಯಕ್ರಿಯೆ: 250 ಕೆ.ಜಿ ಗಂಧದ ಕಟ್ಟಿಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2018, 6:44 IST
Last Updated 26 ನವೆಂಬರ್ 2018, 6:44 IST
   

ಬೆಂಗಳೂರು: ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಕಂಠೀರವ ಸ್ಟುಡಿಯೊದಲ್ಲಿ ಅಂಬರೀಷ್ ಅವರ ಅಂತ್ಯಕ್ರಿಯೆ ನಡೆಯಲಿದೆ.

10 ಕೆಜಿ ತುಪ್ಪ, 250 ಕೆ.ಜಿ ಗಂಧದ ಕಟ್ಟಿಗೆ ತರಲಾಗಿದ್ದು, ಹಾಲು, ಮೊಸರು, ಪಂಚಗವ್ಯ ಬಳಕೆ ಮಾಡಲಾಗುತ್ತದೆ. ಹೂವಿನ ಅಲಂಕಾರ ಹಾಗೂ ಪಾರ್ಥಿವ ಶರೀರದ ಬಾಯಲ್ಲಿ ಚಿನ್ನದ ನಾಣ್ಯ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು‌ ತಿಳಿಸಿವೆ.

ಹುಣಿಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನೂ ತರಲಾಗಿದೆ. ಅಂತ್ಯಕ್ರಿಯೆ ಸ್ಥಳದಲ್ಲಿ ನಾಲ್ಕು ಹಂತದಲ್ಲಿ ಚಿತೆಗೆ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ.

ADVERTISEMENT

ನಾಗೇಶ್ ದೀಕ್ಷಿತ್‌ ನೇತೃತ್ವದಲ್ಲಿ ಅಂತ್ಯಕ್ರಿಯೆಗೂ ‌ಪೂರ್ವ ವಿಧಿವಿಧಾನ ಆರಂಭವಾಗಿದೆ.

ಚಿತೆಗೆ ನಿರ್ಮಿಸಲಾಗಿರುವ ವೇದಿಕೆಗೆ ಕಲೆಯ ಸ್ಪರ್ಶ

ಚಿತೆಗೆ ವೇದಿಕೆ

* ಮೊದಲ ಹಂತ 16*16; ಒಂದೂವರೆ ಅಡಿ ಆಳದ ಗುಂಡಿ ತೆಗೆದು ಅದಕ್ಕೆ ಕಾಂಕ್ರೀಟ್ ಹಾಕಲಾಗಿದೆ
* ಎರಡನೆ ಹಂತದಲ್ಲಿ 16 *16 ಅಡಿ ಭೂಮಿ ಮೇಲೆ ಕಟ್ಟೆ ನಿರ್ಮಿಸಲಾಗಿದೆ
* ಮೂರನೇ ಹಂತದಲ್ಲಿ 11*14 ಅಡಿ (ಎರಡು ಕೋರ್ಸ್ ಇಟ್ಟಿಗೆ ಗೋಡೆ)
* ನಾಲ್ಕನೇ ಹಂತದಲ್ಲಿ 9*11 ಅಡಿ ಗೋಡೆ( ಚಿತೆ ಜೋಡಿಸಲು) ನಿರ್ಮಿಸಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.