ADVERTISEMENT

ಬೆಂಗಳೂರಿನ ಇಡ್ಲಿ ಎಟಿಎಂ ಕುರಿತು ಪ್ರಶ್ನಿಸಿದ ಆನಂದ್‌ ಮಹೀಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 10:27 IST
Last Updated 17 ಅಕ್ಟೋಬರ್ 2022, 10:27 IST
   

ಎರಡು ದಿನಗಳ ಹಿಂದಷ್ಟೆ ನಗರದಲ್ಲಿನ ಇಡ್ಲಿ ಎಟಿಎಂ ವಿಡಿಯೊ ಟ್ವಿಟರ್‌ನಲ್ಲಿ ವೈರಲ್‌ ಆಗಿತ್ತು. ಆ ವಿಡಿಯೊ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರ, ಇಡ್ಲಿಯ ರುಚಿ ಹೇಗಿದೆ ಎಂಬುದಾಗಿ ಟ್ವೀಟ್‌ನಲ್ಲಿ ಬೆಂಗಳೂರಿಗರನ್ನು ಪ್ರಶ್ನಿಸಿದ್ದಾರೆ.

‘ಬಹಳಷ್ಟು ಜನ ರೊಬೊಟಿಕ್ ಆಹಾರ ತಯಾರಿಕೆ/ವಿತರಣಾ ಯಂತ್ರಗಳನ್ನು ಉತ್ಪಾದಿಸಲು ಪ್ರಯತ್ನಿಸಿದ್ದಾರೆ. ಇದುಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರd (ಎಫ್‌ಎಸ್‌ಎಸ್‌ಎಐ) ಮಾನದಂಡಗಳನ್ನು ಪೂರೈಸುವುದು ಮತ್ತು ಪದಾರ್ಥಗಳನ್ನು ಸಮರ್ಪಕವಾಗಿ ತಾಜಾವಾಗಿಸಲು ಶಕ್ತವಾಗಿದೆಯೆ? ಬೆಂಗಳೂರಿಗರೇ ಇಡ್ಲಿ ರುಚಿ ಹೇಗಿದೆ? ಜಾಗತಿಕವಾಗಿ ವಿಮಾನ ನಿಲ್ದಾಣಗಳು/ಮಾಲ್‌ಗಳಲ್ಲಿ ಇದರ ಸ್ಥಾಪನೆ ನೋಡಲು ನಾನು ಇಷ್ಟಪಡುತ್ತೇನೆ’ ಎಂದು ಆನಂದ್‌ ಮಹೀಂದ್ರ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಗುಣಮಟ್ಟ, ರುಚಿ ಚೆನ್ನಾಗಿದೆ. ಆದಾಗ್ಯೂ ಮೆಷಿನ್‌ ಇಂದ ಬಂದ ಆಹಾರ ಮನುಷ್ಯರು ಪೂರೈಕೆ ಮಾಡಿದಂತಹ ಭಾವನೆ ನೀಡುತ್ತಿಲ್ಲ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಆಹಾರ ಉದ್ಯಮದಲ್ಲಾದರೂ ಉದ್ಯೋಗಕ್ಕೆ ಜಾಗವಿತ್ತು. ಇನ್ನು ಮೆಷಿನ್‌ ಅದನ್ನೂ ಕಿತ್ತುಕೊಳ್ಳಲಿದೆ ಎಂದು ಮತ್ತೊಬ್ಬ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡ್ಲಿ ತಿಂದು ಆರೋಗ್ಯವಾಗಿರಬಹುದೆ ಎಂಬುದಾಗಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇಡ್ಲಿ ಬಾಟ್ ಅಥವಾ ಇಡ್ಲಿ ಎಟಿಎಂ ಎಂದು ಕರೆಯಲಾಗುವ ಈ ಯಂತ್ರದ ವಿಡಿಯೊ ವೈರಲ್‌ ಆಗಿತ್ತು. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹೀರಾಮತ್ ಮತ್ತು ಸುರೇಶ್ ಚಂದ್ರಶೇಖರನ್ ಫ್ರೆಶ್‌ಶಾಟ್ ರೊಬೊಟಿಕ್ಸ್ ಎಂಬ ಸ್ಟಾರ್ಟಪ್ ಮೂಲಕ ಇಡ್ಲಿ ಎಟಿಎಂ ಪ್ರಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.