ADVERTISEMENT

ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಅವರಿಗೂ ಬದುಕುವ ಹಕ್ಕಿದೆ: ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 7:29 IST
Last Updated 15 ಸೆಪ್ಟೆಂಬರ್ 2018, 7:29 IST
ಶಿರಸಿ ತಾಲ್ಲೂಕಿನ ಸೋಂದಾದ ಹುಣಸೆಹೊಂಡದಲ್ಲಿ ನಡೆದ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಭಾಗವಹಿಸಿದರು. -ಪ್ರಜಾವಾಣಿ ಚಿತ್ರ
ಶಿರಸಿ ತಾಲ್ಲೂಕಿನ ಸೋಂದಾದ ಹುಣಸೆಹೊಂಡದಲ್ಲಿ ನಡೆದ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಭಾಗವಹಿಸಿದರು. -ಪ್ರಜಾವಾಣಿ ಚಿತ್ರ   

ಶಿರಸಿ:‘ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ. ಸಮಾಜದಲ್ಲಿ ಅವರಿಗೂ ಬದುಕುವ ಹಕ್ಕು ಇದೆ’ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಸಲಿಂಗಕಾಮದ ಬಗ್ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ನೀಡಿರುವ ತೀರ್ಪನ್ನು ಸ್ವಾಗತಿಸಿದ ಅವರು, ‘ಮಾನವೀಯ ನೆಲೆಗಟ್ಟಿನಲ್ಲಿ ತೀರ್ಪನ್ನು ಪರಾಮರ್ಶಿಸಬೇಕು. ಸಲಿಂಗಿಗಳು ಕೂಡ ನಮ್ಮ-ನಿಮ್ಮಂತೆ ಮನುಷ್ಯರಾಗಿದ್ದಾರೆ. ಸಲಿಂಗಕಾಮವನ್ನು ಜಗತ್ತಿನಿಂದ ಅಳಿಸಿಹಾಕಲು ಸಾಧ್ಯವಿಲ್ಲ. ಎಲ್ಲರಂತೆ ಅವರಿಗೂ ಬದುಕಲು ಅವಕಾಶ ನೀಡಬೇಕು’ ಎಂದರು.

‘ಸಮುದಾಯದ ಮಧ್ಯೆ ಬದುಕುತ್ತಿರುವ ಸಲಿಂಗಿಗಳೆಡೆಗೆ ಪ್ರೀತಿ, ಮಮಕಾರ ಬೇಕು’ ಎಂದು ಹೇಳಿದರು.

ADVERTISEMENT

ತಾಲ್ಲೂಕಿನ ಸೋಂದಾದ ಹುಣಸೆಹೊಂಡದಲ್ಲಿ ನಡೆದ 'ಸ್ವಚ್ಛತಾ ಹೀ ಸೇವಾ' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.