ADVERTISEMENT

ನೂತನ ಬ್ರಿಟನ್‌ ಉಪ ಹೈಕಮಿಷನರ್‌ ಆಗಿ ಅನಾ ಶೋಟ್ಬೋಲ್ಟ್ ಅಧಿಕಾರ ಸ್ವೀಕಾರ

‘ಎಂಟಿಆರ್‌1924’ನಲ್ಲಿ ಮಸಾಲೆ ದೋಸೆ ಸವಿದ ಅನ್ನಾ ಶೋಟ್ಬೋಲ್ಡ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 21:23 IST
Last Updated 24 ಫೆಬ್ರುವರಿ 2022, 21:23 IST
ಅನಾ ಶೋಟ್ಬೋಲ್ಟ್
ಅನಾ ಶೋಟ್ಬೋಲ್ಟ್   

ಬೆಂಗಳೂರು: ಬೆಂಗಳೂರಿನಲ್ಲಿನ ನೂತನ ಬ್ರಿಟಿಷ್‌ ಉಪ ಹೈಕಮಿಷನರ್‌ ಆಗಿ ಅನಾ ಶೋಟ್ಬೋಲ್ಟ್ ಅಧಿಕಾರ ಸ್ವೀಕರಿಸಿದ್ದಾರೆ.

ಅನಾ ಅವರು ಕರ್ನಾಟಕ ಮತ್ತು ಕೇರಳದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅಧಿಕಾರ ಸ್ವೀಕರಿಸುವ ಮುನ್ನ ಲಂಡನ್‌ನಲ್ಲಿ ಹೊಸದಾಗಿ ಆರಂಭವಾದ ‘ಎಂಟಿಆರ್‌1924’ ರೆಸ್ಟೋರೆಂಟ್‌ನಲ್ಲಿ ಸ್ವಾದಿಷ್ಟ ಮಸಾಲೆ ದೋಸೆ ಸವಿದಿದ್ದಾರೆ. ಬೆಂಗಳೂರಿನಲ್ಲಿ ಮತ್ತಷ್ಟು ದೋಸೆ ಸವಿಯುವ ಇಚ್ಛೆಯನ್ನು ಅನ್ನಾ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿನ ಹೂಡಿಕೆಗೆ ಸಂಬಂಧಿಸಿದಂತೆ ಉಪ ವ್ಯಾಪಾರ ಕಮಿಷನರ್‌ ಹೊಣೆಯನ್ನು ಸಹ ಅವರು ನಿಭಾಯಿಸಲಿದ್ದಾರೆ. ಬ್ರಿಟನ್‌ ಮತ್ತು ಭಾರತದ ಸಂಬಂಧಗಳಲ್ಲಿ ಬೆಂಗಳೂರಿಗೆ ನೀಡಿರುವ ಮಹತ್ವವನ್ನು ಇದು ಬಿಂಬಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಈ ಹುದ್ದೆಗೆ ಮುನ್ನ ಅನ್ನಾ ಅವರು ಅಂತರಾಷ್ಟ್ರೀಯ ವ್ಯಾಪಾರ ವಿಭಾಗದಲ್ಲಿ ರಫ್ತು ಉತ್ತೇಜನ ಸೇವೆಯ ಉಪ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.