ADVERTISEMENT

ನಿಮ್ಮ ಕರಾಳ ಇತಿಹಾಸದಲ್ಲಿನ ಅಧ್ಯಾಯಗಳ ಪ್ರಶ್ನೆಗಳಿಗೆ ಉತ್ತರಿಸಿ HDK: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2024, 13:30 IST
Last Updated 12 ಆಗಸ್ಟ್ 2024, 13:30 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಡಿ.ಕೆ ಶಿವಕುಮಾರ್ ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿದ್ದರು.

ಇದಕ್ಕೆ ಕಾಂಗ್ರೆಸ್ ಇಂದು ಎಕ್ಸ್‌ ನಲ್ಲಿ ಕುಮಾರಸ್ವಾಮಿ ಅವರ ಹಳೇ ವಿಚಾರಗಳನ್ನು ಪ್ರಸ್ತಾಪಿಸಿ ಕೆಣಕಿದೆ. ಈ ಮೂಲಕ ವಾಕ್ಸಮರ ಮುಂದುವರೆದಿದೆ.

ಕುಮಾರಸ್ವಾಮಿ ಅವರೇ ನಿಮ್ಮ ಕರಾಳ ಇತಿಹಾಸ ಪುಟದಲ್ಲಿ ಮುಚ್ಚಿಹೋದ ಅಧ್ಯಾಯಗಳ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಕಾಂಗ್ರೆಸ್ ಕೇಳಿದೆ.

ADVERTISEMENT

2006ರಲ್ಲಿ ನಿಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಚರ್ಚ್ ಸ್ಟ್ರೀಟ್ ನಲ್ಲಿ, ಅರ್ಧ ರಾತ್ರಿಯಲ್ಲಿ ಗಲಾಟೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿತ್ತು, ನಂತರ ಆ ಪ್ರಕರಣ ಏನಾಯ್ತು? ಎಂದು ಕೇಳಿದೆ.

ಜಂತಕಲ್ ಗಣಿ ಹಗರಣ, ವಿಶ್ವಭಾರತಿ ಹೌಸಿಂಗ್ ಸೊಸೈಟಿ ನಿವೇಶನ ಹಗರಣ, ಬಿಜೆಪಿ ಆರೋಪಿಸಿದ್ದ ಟೆಲಿಪೋನ್ ಟ್ಯಾಪಿಂಗ್ ಹಗರಣದ ತನಿಖೆಗಳು ಯಾವ ಹಂತಕ್ಕೆ ಬಂದಿವೆ ಹೇಳುವಿರಾ? ಎಂದು ಪ್ರಶ್ನಿಸಿದೆ.

ರೈತ ಮಹಿಳೆಗೆ ಇಷ್ಟು ದಿನ ಎಲ್ಲಿ ಮಲಗಿದ್ದೆ ಎಂದು ಕೇಳಿದ್ದಿರಿ ಎಂದು ಕೇಳಿದೆ.

ಲೋಕಸಭೆ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗೆ KRS ಡ್ಯಾಮಿಗೆ ಅಡ್ಡಲಾಗಿ ಮಲಗು ಎಂದಿದ್ದಿರಿ. ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿದ್ದಿರಿ ಎಂದು ಕೇಳಿದೆ.

ಇಂತಹ ಕೊಳಕು ಮನಸಿನ ರಾಜಕಾರಿಣಿಯಾದ ನಿಮಗೆ ಕಾಂಗ್ರೆಸ್ ಬಗ್ಗೆ ಮಾತಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.