
ನವದೆಹಲಿ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳ ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಗೋವಿಂದ ಕಾರಜೋಳ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಬೇಡಿಕೆಗಳು:
ಹೊಸದುರ್ಗ ರಸ್ತೆ, ಹೊಳಲ್ಕೆರೆ, ರಾಮಗಿರಿ, ಚಿಕ್ಕಜಾಜೂರು ಹಾಗೂ ಚಳ್ಳಕೆರೆ ರೈಲು ನಿಲ್ದಾಣಗಳಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ಮತ್ತು ಇಂಟರ್‌ಸಿಟಿ ರೈಲುಗಳನ್ನು ನಿಲುಗಡೆ ಮಾಡಬೇಕು.
ಹಿರಿಯೂರು ತಾಲ್ಲೂಕಿನ ಪಳವ್ವನಹಳ್ಳಿ ಗ್ರಾಮದಲ್ಲಿ ಆರ್‌ಯುಬಿ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ. ಚಳ್ಳಕೆರೆ ಪಟ್ಟಣದಲ್ಲಿ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 45ರಲ್ಲಿ ಆರ್‌ಒಬಿ/ಫ್ಲೈಓವರ್ ನಿರ್ಮಾಣ. ಹೊಸದುರ್ಗ–ಚಿಕ್ಕಜಾಜೂರು ನಡುವಿನ ರಾಮಗಿರಿ ಬಳಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 77Aರಲ್ಲಿ ಆರ್‌ಒಬಿ/ಆರ್‌ಯುಬಿ. ಶ್ರೀರಂಗಪಟ್ಟಣ–ಜೇವರ್ಗಿ ರಾಷ್ಟ್ರೀಯ ಹೆದ್ದಾರಿ 150A ಮತ್ತು ಬೇಡರೆಡ್ಡಿಹಳ್ಳಿ ರಸ್ತೆಯ ನಡುವಿನ ಕಡಿಮೆ ಮಟ್ಟದ ರೈಲು ದಾಟುವಲ್ಲಿ ಆರ್‌ಒಬಿ/ಆರ್‌ಯುಬಿ ನಿರ್ಮಾಣ.
ದಾವಣಗೆರೆ–ಚಿತ್ರದುರ್ಗ ಮುಖ್ಯರಸ್ತೆಯಿಂದ ಚಿತ್ರದುರ್ಗ ರೈಲು ನಿಲ್ದಾಣ ಪ್ರವೇಶದವರೆಗೆ (ಸುಮಾರು 200 ಮೀಟರ್) ಸಿಸಿ ರಸ್ತೆ ನಿರ್ಮಾಣ.
ಹೊಸಪೇಟೆ–ಬೆಂಗಳೂರು ರಾತ್ರಿ ರೈಲನ್ನು (ಚಿತ್ರದುರ್ಗ ಮಾರ್ಗವಾಗಿ) ಮರುಪ್ರಾರಂಭಿಸಬೇಕು. ಶಿವಮೊಗ್ಗ–ಚೆನ್ನೈ ರೈಲನ್ನು ಮರುಪ್ರಾರಂಭಿಸಬೇಕು. ಹುಬ್ಬಳ್ಳಿ–ಚಿಕ್ಕಜಾಜೂರು ರೈಲನ್ನು ಚಿತ್ರದುರ್ಗದವರೆಗೆ ವಿಸ್ತರಿಸಬೇಕು.
ಬೀದರ್–ಮಂಗಳೂರು (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಆರಂಭಿಸಿ, ಮಣಿಪಾಲ್ ಮತ್ತು ಮಂಗಳೂರು ಆಸ್ಪತ್ರೆಗಳಿಗೆ ತೆರಳುವ ರೋಗಿಗಳಿಗೆ ಅನುಕೂಲ ಕಲ್ಪಿಸಬೇಕು. ವಿಜಯಪುರ –ಮೈಸೂರು (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಆರಂಭಿಸಬೇಕು. ಶಿವಮೊಗ್ಗ–ಹೊಸಪೇಟೆ (ಚಿತ್ರದುರ್ಗ ಮಾರ್ಗವಾಗಿ) ಹೊಸ ರೈಲು ಪ್ರಾರಂಭಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.