ಬೆಂಗಳೂರು: ಬಿಜೆಪಿ ಪ್ರಕಾರ ನ್ಯಾಯ ಕೇಳುವುದು ಹಾಗೂ ಪ್ರಶ್ನೆ ಮಾಡುವುದು ದೇಶದ್ರೋಹವಾಗಿ ಬದಲಾಗಿದೆಯೇ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರು - ದೇಶದ್ರೋಹಿಗಳು, ಸಿಎಎ, ಎನ್ಆರ್‌ಸಿ ವಿರುದ್ಧ ಪ್ರತಿಭಟಿಸಿದವರು - ದೇಶದ್ರೋಹಿಗಳು, ಅತ್ಯಾಚಾರಿಯ ವಿರುದ್ಧ ನ್ಯಾಯ ಕೇಳುವ ಕ್ರೀಡಾಪಟುಗಳು - ದೇಶದ್ರೋಹಿಗಳು.ಇದು ಬಿಜೆಪಿಯ ವರಸೆ. ಬಿಜೆಪಿ ಪ್ರಕಾರ ‘ನ್ಯಾಯ’ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಭಾನುವಾರ ನೂತನ ಸಂಸತ್ ಭವನ ಲೋಕಾರ್ಪಣೆಯಾಗಿದ್ದು, ಈ ವೇಳೆ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ನೂತನ ಸಂಸತ್ ಭವನದ ಬಳಿಗೆ ಹೋಗಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ–ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಬ್ರಿಜ್‌ಭೂಷಣ್ ಶರಣ್ ಸಿಂಗ್ ಭಾಗಿಯಾಗಿದ್ದಕ್ಕೂ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ... ನೀತಿ ಆಯೋಗದ ಸಭೆಗೆ ಗೈರಾದ ಸಿದ್ದರಾಮಯ್ಯ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ: ಬಿಜೆಪಿ ಟೀಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.