ADVERTISEMENT

ಪಾನಮತ್ತನಿಂದ ಆಶಾ ಕಾರ್ಯಕರ್ತೆ, ಆಕೆಯ ಪತಿಯ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 2:14 IST
Last Updated 5 ಮೇ 2020, 2:14 IST
ಆಶಾ ಕಾರ್ಯಕರ್ತೆ ರವಣಮ್ಮ ಮತ್ತು ಆಕೆಯ ಪತಿ
ಆಶಾ ಕಾರ್ಯಕರ್ತೆ ರವಣಮ್ಮ ಮತ್ತು ಆಕೆಯ ಪತಿ    

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಪೂಲಕುಂಟ್ಲಹಳ್ಳಿಯಲ್ಲಿ ಸೋಮವಾರ ಸಂಜೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಆರೋಗ್ಯ ಸಮೀಕ್ಷೆಗೆ ಬಂದಿದ್ದ ಆಶಾ ಕಾರ್ಯಕರ್ತೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೂಲಕುಂಟ್ಲಹಳ್ಳಿ ಗ್ರಾಮದ ಕೇಶವ ಎನ್ನುವವರು ಕುಡಿದ ನಶೆಯಲ್ಲಿ ತನ್ನ ಮೇಲೆಹಾಗೂ ತನ್ನನ್ನುಕರೆದುಕೊಂಡು ಹೋಗಲು ಬಂದಿದ್ದ ಪತಿಯ ಮೇಲೆ ಹಲ್ಲೆ ನಡೆಸಿರುವುದಾಗಿ ಆಶಾ ಕಾರ್ಯಕರ್ತೆ ದೂರಿದ್ದಾರೆ.ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಶಾಪ್ತಿಯ ಗಂಗಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯಾದ ರವಣಮ್ಮ ಅವರು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಹಲ್ಲೆಯಲ್ಲಿ ಆಶಾ‌ ಕಾರ್ಯಕರ್ತೆ ಪತಿಗೆ ತೀವ್ರ ರಕ್ತಸ್ರಾವವಾಗಿದ್ದು, ದಂಪತಿ ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

‘ಆಶಾ ಕಾರ್ಯಕರ್ತೆ ದಂಪತಿ ಮೇಲೆ ಹಲ್ಲೆ ‌ಘಟನೆ‌ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕೆ ಹುಡುಕಾಟ ನಡೆದಿದೆ’ ಎಂದು ಚಿಂತಾಮಣಿ ವಿಭಾಗದ ಡಿವೈಎಸ್ಪಿ ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.