ADVERTISEMENT

ಅಂಬೇಡ್ಕರ್ ಬರಹ, ಭಾಷಣಕ್ಕೆ ಆಡಿಯೊ ರೂಪ

ಮಾಲೂರಿನಲ್ಲಿ 19ರಂದು ಪ್ರಥಮ ಸಂಪುಟದ ಆಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 19:50 IST
Last Updated 15 ಫೆಬ್ರುವರಿ 2023, 19:50 IST
   

ಕೋಲಾರ: ಆನಂದ್ ಸಿದ್ಧಾರ್ಥ ಅವರ ‘ಸ್ಯಾಮ್ ಆಡಿಯೊ’ ಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣದ‌ 22 ಸಂಪುಟಗಳನ್ನು ಆಡಿಯೊ ರೂಪದಲ್ಲಿ ಹೊರತರುತ್ತಿದೆ. ಫೆ.19ರಂದು ಮಾಲೂರಿನಲ್ಲಿ ಪ್ರಥಮ ಸಂಪುಟದ ಆಡಿಯೊ ಬಿಡುಗಡೆ ಮಾಡಲಾಗುತ್ತಿದೆ.

ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಂಪುಟದ ಆಡಿಯೊ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಉಪನ್ಯಾಸಕ ಮಂಜುನಾಥ್ ಆರ್‌.ಹುಣಸಿಕೋಟೆ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ದೇಶದಲ್ಲಿಯೇ ಪ್ರಥಮ ಬಾರಿ ಅಂಬೇಡ್ಕರ್ ಅವರ ಸಂಪೂರ್ಣ ಬರಹ–ಭಾಷಣಗಳನ್ನು ಆಡಿಯೊ ಬುಕ್‌ ರೂಪದಲ್ಲಿ ತರಲಾಗುತ್ತಿದೆ. ಎರಡು ವರ್ಷದ ಶ್ರಮ ಇದು. ಸುಮಾರು ₹75 ಲಕ್ಷ ಖರ್ಚಾಗಿದೆ. ಈ ಹಣವನ್ನು ಆನಂದ್‌ ಸಿದ್ಧಾರ್ಥ ಭರಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಮೊದಲ ಸಂಪುಟ 16.30 ಗಂಟೆ ಆಡಿಯೊ ಒಳಗೊಂಡಿದೆ. ಮೊಬೈಲ್‌ನಲ್ಲಿ ‘sam audio’s' ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಕೇಳಬಹುದು. ಉದ್ಘಾಟನೆ ಬಳಿಕ ಆ್ಯಪ್‌ ಲಭ್ಯವಾಗಲಿದೆ ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.