ADVERTISEMENT

ಅಯೋಧ್ಯೆ ತೀರ್ಪು: ಬಹುತೇಕ ವಾಟ್ಸಾಪ್‌ ಗ್ರೂಪ್‌ಗಳ ಬಣ್ಣ ಬದಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 6:54 IST
Last Updated 9 ನವೆಂಬರ್ 2019, 6:54 IST
   

ಬೆಂಗಳೂರು: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳ ಮೇಲೆ ನಿಗಾ ಇರಿಲಾಗಿದೆ ಎಂಬ ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ಬಹುತೇಕ ವಾಟ್ಸಾಪ್‌ಗ್ರೂಪ್‌ಗಳಲ್ಲಿ ಸೆಟಿಂಗ್ಸ್, ಸ್ಟೇಟಸ್‌ಗಳು ಬದಲಾಗಿವೆ.

ಮುಂಜಾನೆಯಿಂದಲೇ ಬಹುತೇಕ ಗ್ರೂಪ್‌ಗಳುonly admin can send messages ಎಂದಾಗಿವೆ. ಕೆಲ ಧಾರ್ಮಿಕ ಗುಂಪುಗಳ ಗ್ರೂಪ್ ಐಕಾನ್ ಆಗಿದ್ದ ರಾಮನ ಜಾಗದಲ್ಲಿ ಕೃಷ್ಣ, ವೆಂಕಟರಮಣನಂಥ ವಿವಾದಾತೀತ ದೇವರುಗಳು ಬಂದಿದ್ದಾರೆ.

ಕೆಲವರು ದೇವರು, ಧರ್ಮಗಳ ಉಸಾಬರಿಯೇ ಬೇಡವೆಂದು ಸೂರ್ಯೋದಯದಂಥ ಚಿತ್ರಗಳನ್ನು ಹಾಕಿಕೊಂಡಿದ್ದಾರೆ. ಆದರೆ ಚಂದ್ರನ ಚಿತ್ರಗಳನ್ನು ಅವಾಯ್ಡ್ ಮಾಡಲಾಗುತ್ತಿದೆ.

ಕೆಲ ಗುಂಪುಗಳ ಅಡ್ಮಿನ್‌ಗಳುತಮ್ಮ ಸದಸ್ಯರಿಗೆ ನಿನ್ನೆಯೇ 'ಕೋಮು ಭಾವನೆ ಪ್ರಚೋದಿಸುವ ಸಂದೇಶ ಕಳಿಸಬಾರದೆಂದು' ತಿಳಿ ಹೇಳಿದ್ದಾರೆ.

‘ವಾಟ್ಸಾಪ್ ಗ್ರೂಪಿನಲ್ಲಿ ಬರುವ ಮೆಸೇಜುಗಳನ್ನು ಪೊಲೀಸರು ಗಮನಿಸುತ್ತಿದ್ದಾರೆ. ಕೋಮು ಭಾವನೆ ಕೆರಳಿಸುವ ಮೆಸೇಜುಗಳಿದ್ದರೆ ಅಡ್ಮಿನ್ಗಳನ್ನು ಹೊಣೆ ಮಾಡಲಾಗುವುದು ಎಂದಿದ್ದಾರೆ. ಹೀಗಾಗಿ ನಾನು ನಮ್ಮ ಗ್ರೂಪ್ ಸೆಟಿಂಗ್ ಬದಲಿಸಿ, admin only ಮಾಡಿದ್ದೇನೆ. ನಾಡಿದ್ದು ಹೀಟ್ ನೋಡಿಕೊಂಡು ಮತ್ತೆ anyone can postಗೆ ಸೆಟಿಂಗ್ ಬದಲಿಸುತ್ತೇನೆ' ಎಂದು ಸುರುಚಿ ಗ್ರೂಪ್‌ನಅಡ್ಮಿನ್ ರಾಘವೇಂದ್ರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

'ವಾಟ್ಸಾಪ್ ಮೆಸೇಜ್‌ಗಳುಗೂಢಲಿಪಿಯಲ್ಲಿರುತ್ತವೆ. ಅದನ್ನು ಬ್ರೇಕ್ ಮಾಡಿ ನಿಗಾ ಇರಿಸುವುದು ಸುಲಭವಲ್ಲ' ಎಂಬ ಸಂದೇಶಗಳೂ ಹರಿದಾಡುತ್ತಿವೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ಹೆಸರಿನಲ್ಲಿರುವ ಎಚ್ಚರಿಕೆಯ ಸಂದೇಶ ಬಹುತೇಕ ಗುಂಪುಗಳಲ್ಲಿ ಹರಿದಾಡುತ್ತಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.