ADVERTISEMENT

‘ಡೆಂಗಿ ಜ್ವರಕ್ಕೆ ಶೀಘ್ರ ಆಯುರ್ವೇದ ಮದ್ದು’

ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯಕ್

ಪಿಟಿಐ
Published 4 ನವೆಂಬರ್ 2018, 20:33 IST
Last Updated 4 ನವೆಂಬರ್ 2018, 20:33 IST
ಶ್ರೀಪಾದ್‌ ನಾಯಕ್
ಶ್ರೀಪಾದ್‌ ನಾಯಕ್   

ನವದೆಹಲಿ: ಡೆಂಗಿ ಜ್ವರಕ್ಕೆ ಶೀಘ್ರವೇ ಆಯುರ್ವೇದ ಔಷಧ ಸಿದ್ಧಪಡಿಸಲಾಗುತ್ತದೆಎಂದು ಕೇಂದ್ರ ಆಯುಷ್ ಇಲಾಖೆ ಸಚಿವಶ್ರೀಪಾದ್ ನಾಯಕ್ ತಿಳಿಸಿದ್ದಾರೆ.

‘ಈ ನಿಟ್ಟಿನಲ್ಲಿ ಪ್ರಯೋಗಾಲಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಔಷಧ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

‘ಆಯುರ್ವೇದದಲ್ಲಿ ಉದ್ಯಮಶೀಲತೆ ಹಾಗೂ ಉದ್ಯಮ ಅಭಿವೃದ್ಧಿ’ ಕುರಿತು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸಮಾವೇಶದ ಸಂದರ್ಭದಲ್ಲಿ ಮಾತನಾಡಿದಅವರು, ‘ಪ್ರಸ್ತುತ ಆಯುರ್ವೇದ ಮತ್ತು ಆಯುಷ್ ಉದ್ದಿಮೆಯ ವಹಿವಾಟು ₹21,874 ಕೋಟಿ ಇದ್ದು, ಇದನ್ನು 2022ರ ವೇಳೆಗೆ ₹72,915 ಕೋಟಿಗೆ ವಿಸ್ತರಿಸುವ ಗುರಿ ಇರಿಸಿಕೊಳ್ಳಲಾಗಿದೆ’ ಎಂದರು.

ADVERTISEMENT

ಆಯುರ್ವೇದ, ಆಯುಷ್ ಉತ್ಪನ್ನಗಳು ಹಾಗೂ ಚಿಕಿತ್ಸೆಗಳ ಮಾರುಕಟ್ಟೆ ವಿಸ್ತರಿಸುವುದರಿಂದ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಬಹುದು ಎಂದು ಸಂಸ್ಕೃತಿ ವ್ಯವಹಾರಗಳ ರಾಜ್ಯ ಸಚಿವ ಮಹೇಶ್ ಶರ್ಮಾ ಇದೇ ವೇಳೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.