ADVERTISEMENT

ಬಿಜೆಪಿ ಬಿಟ್ಟು ಬೇರೆ ಯಾರಾದರೂ ಪ್ರಧಾನಿ ಆಗಲಿ: ಬಿ.ಕೆ. ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 6:00 IST
Last Updated 9 ಜುಲೈ 2018, 6:00 IST
ಬಿ.ಕೆ.ಹರಿಪ್ರಸಾದ್‌ (ಸಂಗ್ರಹ ಚಿತ್ರ).
ಬಿ.ಕೆ.ಹರಿಪ್ರಸಾದ್‌ (ಸಂಗ್ರಹ ಚಿತ್ರ).   

ಬಾಗಲಕೋಟೆ: ‘ಸಚಿವ ಸದಾನಂದ ಗೌಡಒಬ್ಬರು ರಾಜಕೀಯ ಪಂಡಿತರಾಗಿದ್ದಾರೆ. ಹಾಗಾಗಿರಾಜಕೀಯ ಭವಿಷ್ಯ ನುಡಿದಿದ್ದಾರೆ. ಇಂತಹಭವಿಷ್ಯದಿಂದ ಮುಂದೆ ಏನಾಗಬಹುದು ಎನ್ನುವುದನ್ನು ಕೇಂದ್ರದ ಎನ್‌ಡಿಎ ಸರ್ಕಾರದ ಸಂಖ್ಯಾಬಲ ನೋಡಿದರೆ ಗೊತ್ತಾಗುತ್ತದೆ’ ಎಂದು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ವ್ಯಂಗ್ಯವಾಡಿದರು.

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನವಾಗುತ್ತದೆಎಂದು ಹೇಳಿಕೆ ನೀಡಿದ್ದ ಸದಾನಂದ ಗೌಡ ಹೇಳಿಕೆ ಅವರು ತಿರುಗೇಟು ನೀಡಿದರು.

ಅನೇಕ ರಾಜಕೀಯ ಮುಖಂಡರು ಕೇಂದ್ರ ಸರ್ಕಾರವನ್ನು ಬಿಟ್ಟು ಹೋಗುತ್ತಿದ್ದು, ಸಂಖ್ಯಾ ಬಲದಲ್ಲಿ ಬಿಜೆಪಿ ಅಲ್ಪಸಂಖ್ಯಾತವಾಗಿದೆ ಎಂದು ಕಿಡಿಕಾರಿದರು.

ADVERTISEMENT

ರಂಭಾಪುರಿ ಶ್ರೀ ಹೇಳಿಕೆಗೆ ನಕಾರ
‘ಸ್ವಾಮೀಜಿಯವರ ಮಾತನಾಡುವಾಗ ರಾಜಕಾರಣಿಗಳು ಮಾತನಾಡುವುದು ಸರಿಯಲ್ಲ. ರಾಜಕಾರಣಿಗಳು ಮಾತನಾಡಿದರೆ ಉತ್ತರ ಕೊಡುತ್ತಿದ್ದೆ’ ಎಂದರು.

ನಿಗಮ ಮಂಡಳಿ ನೇಮಕ: ಈ ಕುರಿತುಯಾವುದೇ ಅಸಮಾಧಾನ ಇಲ್ಲ. ಮೊದಲ ಹಂತದಲ್ಲಿ ಶಾಸಕರಿಗೆ ಅವಕಾಶನೀಡುವ ಬಗ್ಗೆ ನಿರ್ಧಾರವಾಗಿದೆ. ಬಳಿಕ ಹಿರಿಯ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಕಡೆಗಣನೆ:ಬಜೆಟ್‌ ಅಂತಿಮ ಭಾಷಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಲ್ಲವೂ ಸರಿ ಮಾಡುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ – ಜೆಡಿಎಸ್‌ ಒಗ್ಗಟು:ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಒಟ್ಟಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲಿವೆ.ಬಿಜೆಪಿಯ ಪ್ರಧಾನಮಂತ್ರಿ ಉಳಿದುಕೊಳ್ಳಬಾರದೆನ್ನುವದು ನಮ್ಮ ನಿರ್ದಿಷ್ಟಗುರಿಯಾಗಿದೆ. ಬಿಜೆಪಿ ಬಿಟ್ಟು ಬೇರೆಯಾರಾದರೂ ಪ್ರಧಾನಮಂತ್ರಿ ಆಗಲಿ ಎಂದರು.

ಈಗಿನ ಸನ್ನಿವೇಶದಲ್ಲಿ ಏಕಾಂಗಿಯಾಗಿ ಹೋರಾಡುವ ಶಕ್ತಿ ಕಾಂಗ್ರೆಸ್‌ಗೆ ಇದೆ. ಬದಲಾದ ಸನ್ನಿವೇಶದಲ್ಲಿ ಬಿಜೆಪಿ ದುರಾಡಳಿತ ಕೊನೆಗಾಣಿಸಲು ಕಾಂಗ್ರೆಸ್ ಎಲ್ಲರ ಸಹಕಾರ ಕೋರಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.