ADVERTISEMENT

ವಿವಾದ ಹುಟ್ಟುಹಾಕಿದ ಶಿಕ್ಷಣ ಇಲಾಖೆ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 8:53 IST
Last Updated 12 ನವೆಂಬರ್ 2019, 8:53 IST
ಡಾ.ಬಿ.ಆರ್.ಅಂಬೇಡ್ಕರ್
ಡಾ.ಬಿ.ಆರ್.ಅಂಬೇಡ್ಕರ್   

ಬೆಂಗಳೂರು: ‘ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರೇ ರಚಿಸಿಲ್ಲ. ಬೇರೆ ಬೇರೆ ಸಮಿತಿಗಳು ಬರೆದದ್ದನ್ನು ನೋಡಿ ಅವುಗಳನ್ನು ಒಟ್ಟುಗೂಡಿಸಿ, ಸಂವಿಧಾನದ ಅಂತಿಮ ಕರಡನ್ನು ತಯಾರಿಸುವುದು ಅವರ ಕಾರ್ಯವಾಗಿತ್ತು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರು’ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ವಿವಾದಕ್ಕೆ ಸಿಲುಕಿದೆ.

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ. 26ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯ ಕೈಪಿಡಿಯಲ್ಲಿ ‘ನಮ್ಮ ಸಂವಿಧಾನವನ್ನು ಬರೆದವರು ಯಾರು?’ ಎಂಬ ಶೀರ್ಷಿಕೆ ನೀಡಿ ವಿವರಣೆ ಕೊಡಲಾಗಿದೆ. ‘ಸಾಕಷ್ಟು ಜನರಿಗೆ ತಿಳಿದಿರುವಂತೆ ಡಾ.ಅಂಬೇಡ್ಕರ್ ಸಂವಿಧಾನದ ಪಿತಾಮಹ ಆಗಿರುತ್ತಾರೆ. ಜತೆಗೆ ಸಂವಿಧಾನವನ್ನು ಅವರೊಬ್ಬರೇ ಬರೆದಿಲ್ಲ. ದೇಶದಾದ್ಯಂತ ಇರುವ ವಿವಿಧ ಧರ್ಮ, ಜಾತಿ, ಬುಡಕಟ್ಟಿಗೆ ಸೇರಿದ ಅನೇಕ ಪುರುಷರು, ಮಹಿಳೆಯರು ಸೇರಿ ಮಾಡಿರುವಂತಹ ಒಂದು ಸಾಮೂಹಿಕ ಪ್ರಯತ್ನದ ಫಲವಾಗಿದೆ. ಸಂವಿಧಾನ ರಚನೆ ಹಿಂದೆ ಸಾಕಷ್ಟು ಚರ್ಚೆ, ಭಿನ್ನಾಭಿಪ್ರಾಯ ಮತ್ತು ಬದಲಾವಣೆಗಳಂತಹ ಅನೇಕ ಕ್ರಿಯೆಗಳು ನಡೆದಿವೆ’ ಎಂದು ನಮೂದಿಸಲಾಗಿದೆ.

ಒತ್ತಾಯ: ‘ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಕೆಲಸದಿಂದ ವಜಾಗೊಳಿಸಬೇಕು. ಆಯುಕ್ತರನ್ನು ತಕ್ಷಣ ವರ್ಗಾವಣೆ ಮಾಡಬೇಕು’ ಎಂದು ಪರಿಶಿಷ್ಟ ಜಾತಿ, ವರ್ಗಗಳ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.