ADVERTISEMENT

‘ಲೋಟಸ್‌ ಅಂದರೆ ಲೂಟರ್ಸ್‌’: ಮಾಜಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:15 IST
Last Updated 16 ಏಪ್ರಿಲ್ 2019, 20:15 IST

ಮಂಗಳೂರು: ‘ಲೋಟಸ್‌ (ಕಮಲ) ಎಂದರೆ ಲೂಟರ್ಸ್‌ (ಲೂಟಿಕೋರರು). ಬಿಜೆಪಿ ಚಿಹ್ನೆಯೇ ಲೂಟಿಕೋರರ ಚಿಹ್ನೆ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದರು.

ಚುನಾವಣೆ ಕುರಿತು ಬಿಜೆಪಿ ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆ ಕುರಿತು ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಈ ಬಾರಿಯ ಚುನಾವಣೆ ಲೋಟಸ್‌ ಮತ್ತು ಲೂಟರ್ಸ್‌ ನಡುವೆ ನಡೆಯುತ್ತದೆ ಎಂದು ಸಿ.ಟಿ.ರವಿ ಯಾನೆ ಕೋಟಿ ರವಿ ಹೇಳಿದ್ದಾರೆ. ಲೋಟಸ್‌ ಲೂಟಿಯ ಚಿಹ್ನೆ’ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಸರಿಯಾದ ಅರಿವಿದೆ. ಲೂಟಿಕೋರರನ್ನು ಸೋಲಿಸಲು ಜನರು ಸಜ್ಜಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬದಲಾವಣೆಗಾಗಿ ಮತದಾರರು ಕಾಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಿಥುನ್‌ ರೈ ನಿರಾಯಾಸದಿಂದ ಗೆಲುವು ಸಾಧಿಸಲಿದ್ದು, ಲೋಕಸಭೆ ಪ್ರವೇಶಿಸಲಿದ್ದಾರೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.