ADVERTISEMENT

ಸರ್ಕಾರಿ ಬಸ್ಸಿನಲ್ಲೇ ಮಗುವಿಗೆ ಜನ್ಮ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 18:44 IST
Last Updated 25 ಸೆಪ್ಟೆಂಬರ್ 2019, 18:44 IST
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರತ್ನಮ್ಮ ಹಾಗೂ ಮಗು
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರತ್ನಮ್ಮ ಹಾಗೂ ಮಗು   

ಮೊಳಕಾಲ್ಮುರು:ತಾಲ್ಲೂಕಿನ ರಾಂಪುರಸಮೀಪದ ಕೆಳಗಿನ ಕಣಿವೆ ಬಳಿಗರ್ಭಿಣಿಯೊಬ್ಬರು ಸಾರಿಗೆ ಸಂಸ್ಥೆ ಬಸ್ಸಿನಲ್ಲೇ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಗೊಲ್ಲ ನಿಂಗೇನಹಳ್ಳಿ ಗ್ರಾಮದ ರತ್ನಮ್ಮ ಅವರಿಗೆ ಬುಧ ವಾರ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಮನೆಯವರು ಆಂಬುಲೆನ್ಸ್‌ಗಾಗಿ ರಾಂಪುರ ಹಾಗೂ ಚೋರನೂರು ಆಸ್ಪತ್ರೆಯ ಸಿಬ್ಬಂದಿಗೆ ಕರೆ ಮಾಡಿದ್ದರು. ಆದರೆ ಅಂಬುಲೆನ್ಸ್‌ ಬರುವುದರೊಳಗೆಸಂಡೂರು-ರಾಂಪುರ ನಡುವೆ ಸಂಚರಿಸುವ ಸಾರಿಗೆ ಬಸ್ಸಿನಲ್ಲಿ ರಾಂಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುತ್ತಿರುವಾಗಬಸ್ಸಿನಲ್ಲೇ ಹೆರಿಗೆಯಾಗಿದೆ.

ರತ್ನಮ್ಮ ಅವರಿಗೆ ಮೂರು ಹೆಣ್ಣುಮಕ್ಕಳಿವೆ. ಇದು ನಾಲ್ಕನೆಯದ್ದು. ‘ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.