ADVERTISEMENT

ಬೆಂಗಳೂರು– ಮೈಸೂರು ದಶಪಥ ಇದೀಗ ಬೋಟ್ ಪಥ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2023, 14:44 IST
Last Updated 18 ಮಾರ್ಚ್ 2023, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಯೋಜನೆಯು ಇದೀಗ, ಒಂದೇ ಮಳೆಗೆ ಏಕಪಥ ರಸ್ತೆಯಾಗಿದೆ. ಇನ್ನೆರಡು ಬೋಟ್ ಪಥವಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಸರ್ಕಾರದವರ ಮುಂದಾಲೋಚನೆಯಿಂದ ಈ ಜಲಸಾರಿಗೆ ಮಾರ್ಗಗಳನ್ನೂ ನಿರ್ಮಿಸಿದ್ದಾರೆ. ಶೀಘ್ರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಬೋಟ್ ಪ್ರಯಾಣ ಮಾಡಿ ಉದ್ಘಾಟಿಸಲಿದ್ದಾರೆ ಎಂದು ಟೀಕಿಸಿದೆ.

‘ದಶಪಥ ಯೋಜನೆಯು ಮೋದಿಯವರ ಮೇಲುಸ್ತುವಾರಿಯಲ್ಲಿ ಹಾಗೂ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಖುದ್ದಾಗಿ ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದ ಅಭಿವೃದ್ಧಿ ಯೋಜನೆ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.