ADVERTISEMENT

ಡೀಲ್ ಮಾಡೋದೆ ಕಾವೇರಿ ನಿವಾಸದಲ್ಲಿ: ವಿಜಯೇಂದ್ರ ವಿರುದ್ದ‌ ಯತ್ನಾಳ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 6:43 IST
Last Updated 5 ಜುಲೈ 2021, 6:43 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಮೈಸೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಸಿಎಂ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ ಹೌಸ್‌ ಮೇಲೆ ಯಾಕೆ ದಾಳಿ ಮಾಡ್ತಿಲ್ಲ. ಸಿಸಿಬಿ ಪೊಲೀಸರು ಅಲ್ಲೂ ರೈಡ್ ಮಾಡಬೇಕು. ವಿಜಯೇಂದ್ರ ಡೀಲ್ ಮಾಡೋದೆ ಆ ಸ್ಥಳದಲ್ಲಿ ಎಂದು ಆರೋಪಿಸಿದ್ದಾರೆ.

ಆಗಸ್ಟ್ 15 ನೂತನ ಸಿಎಂ ಧ್ವಜಾರೋಹಣ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಅಲ್ಲಿವರೆಗೂ ಯಾಕೆ ಮುಂದುವರೆಸಬೇಕು. ಶೀಘ್ರದಲ್ಲೇ ಸಿಎಂ ಬದಲಾವಣೆ ಮಾಡಬೇಕು‌. ದಿನಕ್ಕೆ ನೂರು ಕೋಟಿ ಲೂಟಿ ಹೊಡೆಯುತ್ತಿದ್ದಾರೆ. ಕೆಟ್ಟವರೊಂದಿಗೆ ಒಳ್ಳೆಯವರೂ ಸೇರಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಳಂಬ ಆಗುತ್ತಿದೆ ಎಂದಿದ್ದಾರೆ.

ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಭೀಷ್ಮ, ದ್ರೋಣಾಚಾರ್ಯರಂತಹ ಒಳ್ಳೆಯವರೂ ಇದ್ದರು. ಒಮ್ಮೊಮ್ಮೆ ಹೀಗೆಲ್ಲ ಆಗುತ್ತೆ. ಆದರೆ ದುಷ್ಟ ಸಂಹಾರ ಆಗಲೇಬೇಕಲ್ವ ? ಕೆಟ್ಟವರಿಗೆ ಕೊನೆಗಾಲ ಅಂತ ಇದ್ದೇ ಇರುತ್ತೆ. ಅಲ್ಲಿವರೆಗೂ ಕಾಯೋಣ. ಹೈಕಮಾಂಡ್ ಕೂಡ ಮುಖ್ಯಮಂತ್ರಿ ಬದಲಾವಣೆಗೆ ಪರಿಶೀಲನೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿ ಹೈಕಮಾಂಡ್ ಯತ್ನಾಳಗೆ ಮಾಹಿತಿ ನೀಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಆಗಿದ್ರೆ ಕಾಂಗ್ರೆಸ್‌ನವರುಕತ್ತೆ ಕಾಯ್ತ ಇದ್ದಾರಾ?. ಭ್ರಷ್ಟರ ಜೊತೆ ವಿರೋಧ ಪಕ್ಷಗಳು ಕೈ ಜೋಡಿಸಿವೆ. ಶೋಭಾ ಡೆವಲಪರ್ಸ್‌‌ನಲ್ಲಿ ಯಾರು ಪಾಲುದಾರರು ಎಂಬುದನ್ನು ಮಾಧ್ಯಮಗಳು ತನಿಖೆ ಮಾಡಬೇಕು. ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ. ಬಿ ಎಸ್ ಯಡಿಯೂರಪ್ಪ ಜೊತೆ ಎಲ್ಲರೂ ಶಾಮೀಲಾಗಿದ್ದಾರೆ. ಅವರಿಗೂ ಭ್ರಷ್ಟಾಚಾರದಲ್ಲಿ ಪಾಲಿದೆ. ಈಗಾಗಿ ಅವರು ಯಾರು ಯಡಿಯೂರಪ್ಪ ವಿರುದ್ದ ಮಾತಾನಾಡುತ್ತಿಲ್ಲ. ಅವರಿಗೂ ಯಡಿಯೂರಪ್ಪ ಮುಂದುವರಿಯಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಎಲ್ಲ ಸಮುದಾಯಗಳ ನಾಯಕತ್ವ ಮುಗಿಸುತ್ತಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಯಾವೊಬ್ಬ ನಾಯಕನನ್ನು ಬೆಳೆಯಲು ಬಿಡುತ್ತಿಲ್ಲ. ರಮೇಶ ಜಾರಕಿಹೊಳಿಅವರಿಗೆ ಅನ್ಯಾಯ ಆಗಿದೆ‌. ಅವರ ಕೇಸ್‌ನಲ್ಲಿ ಬಿ ರಿಪೋರ್ಟ್ ಹಾಕುವ ಅವಕಾಶ ಇದ್ದರು ಬಿಡ್ತಿಲ್ಲ. ಬ್ಲ್ಯಾಕ್ ಮೇಲ್ ಮಾಡುವ ಸಲುವಾಗಿಯೇ ಆ ಕೇಸನ್ನುಇಟ್ಟುಕೊಳ್ಳಲಾಗಿದೆ. ವಾಲ್ಮೀಕಿ ಸಮುದಾಯದ ನಾಯಕತ್ವಮುಗಿಸುವ ಹುನ್ನಾರ ನಡೆದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.