ADVERTISEMENT

ಬದುಕು ರೂಪಿಸಿದ ನ್ಯಾಷನಲ್‌ ಕಾಲೇಜು: ಪೊಲೀಸ್‌ ಅಧಿಕಾರಿ ಅರುಣ್‌ ಚಕ್ರವರ್ತಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 15:00 IST
Last Updated 27 ಆಗಸ್ಟ್ 2021, 15:00 IST
ಕಾಲೇಜಿನ ವತಿಯಿಂದ ‌ಅರುಣ್‌ ಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎ.ಎಚ್.ರಾಮರಾವ್, ಕಾರ್ಯದರ್ಶಿ ಪ್ರೊ. ಎಸ್.ಎನ್.ನಾಗರಾಜ ರೆಡ್ಡಿ, ಪ್ರಾಂಶುಪಾಲೆ ಅನ್ನಪೂರ್ಣಮ್ಮ, ಕಾಲೇಜು ಅಧ್ಯಾಪಕ ಮಂಡಳಿ ಕಾರ್ಯದರ್ಶಿ ಪ್ರೊ. ಪಿ.ಎಲ್.ರಮೇಶ್ ಇದ್ದರು.
ಕಾಲೇಜಿನ ವತಿಯಿಂದ ‌ಅರುಣ್‌ ಚಕ್ರವರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎ.ಎಚ್.ರಾಮರಾವ್, ಕಾರ್ಯದರ್ಶಿ ಪ್ರೊ. ಎಸ್.ಎನ್.ನಾಗರಾಜ ರೆಡ್ಡಿ, ಪ್ರಾಂಶುಪಾಲೆ ಅನ್ನಪೂರ್ಣಮ್ಮ, ಕಾಲೇಜು ಅಧ್ಯಾಪಕ ಮಂಡಳಿ ಕಾರ್ಯದರ್ಶಿ ಪ್ರೊ. ಪಿ.ಎಲ್.ರಮೇಶ್ ಇದ್ದರು.   

ಬೆಂಗಳೂರು: ‘ನ್ಯಾಷನಲ್‌ ಕಾಲೇಜು ಸಾಕಷ್ಟು ಮಂದಿ ಸಾಧಕರನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ ಎಂಬುದು ಹೆಮ್ಮೆಯ ವಿಷಯ’ ಎಂದುಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಹಾಗೂ ನ್ಯಾಷನಲ್‌ ಕಾಲೇಜಿನ ಹಿರಿಯ ವಿದ್ಯಾರ್ಥಿ ಅರುಣ್‌ ಚಕ್ರವರ್ತಿ ಹೇಳಿದರು.

ಬಸವನಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ನಡೆದ ಮೂರು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನನ್ನ ಬೆಳವಣಿಗೆಯಲ್ಲಿ ನ್ಯಾಷನಲ್‌ ಕಾಲೇಜಿನ ಕೊಡುಗೆ ಸಾಕಷ್ಟಿದೆ. ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯ ಅಗತ್ಯವನ್ನು ತಿಳಿಸಿಕೊಡುತ್ತದೆ. ಸಾಮಾಜಿಕ ಜವಾಬ್ದಾರಿ ಹಾಗೂ ಉನ್ನತ ಆಲೋಚನೆಗಳೊಂದಿಗೆ ಬದುಕುವುದನ್ನೂ ಕಲಿಸುತ್ತದೆ. ಇಂತಹ ಕಾರ್ಯವನ್ನು ನ್ಯಾಷನಲ್‌ ಕಾಲೇಜು ಹಿಂದಿನಿಂದಲೂ ಮಾಡಿಕೊಂಡು ಬಂದಿದೆ’ ಎಂದರು.

ADVERTISEMENT

ಇದೇ 24ರಿಂದ 27ರವರೆಗೂ ನಡೆದ ಈ ಕಾರ್ಯಾಗಾರದಲ್ಲಿ ಹಲವು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.