ADVERTISEMENT

‘ಬಸವಣ್ಣನೇ ನಾಡ ದೇವರು’

ವಚನಜ್ಯೋತಿ ಬಳಗದಿಂದ ಸಂಭ್ರಮದ ವಚನ ವಿಜಯದಶಮಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 20:56 IST
Last Updated 6 ಅಕ್ಟೋಬರ್ 2022, 20:56 IST
ವಿಜಯದಶಮಿಯ ಪ್ರಯುಕ್ತ ನಗರದ ಕಲ್ಯಾಣ ಬಡಾವಣೆಯಲ್ಲಿ ಆಯೋಜಿಸಿದ್ದ ಬಸವಣ್ಣನ ವಚನ ಸಂಪುಟಗಳ ಮೆರವಣಿಗೆಯಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ ಭಾಗವಹಿಸಿದ್ದರು.
ವಿಜಯದಶಮಿಯ ಪ್ರಯುಕ್ತ ನಗರದ ಕಲ್ಯಾಣ ಬಡಾವಣೆಯಲ್ಲಿ ಆಯೋಜಿಸಿದ್ದ ಬಸವಣ್ಣನ ವಚನ ಸಂಪುಟಗಳ ಮೆರವಣಿಗೆಯಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ ಭಾಗವಹಿಸಿದ್ದರು.   

ಬೆಂಗಳೂರು: ‘ಪುರಾಣಗಳ ಹಿಂಸೆಯ ಚಿತ್ರಣದ ಬದಲಿಗೆ ಪ್ರೀತಿ ವಿಶ್ವಾಸದಿಂದ ಎಲ್ಲರನ್ನೂ ಒಪ್ಪಿಕೊಂಡು ಅಪ್ಪಿಕೊಂಡು ತನ್ನ ಜೊತೆಗೆ ಕರೆದುಕೊಂಡು ಹೆಜ್ಜೆ ಹಾಕಿದ ಬಸವಣ್ಣನೇ ನಾಡ ದೇವರು’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ವಚನಜ್ಯೋತಿ ಬಳಗದಿಂದ ಆಯೋಜಿಸಿದ್ದ ‘ವಚನ ವಿಜಯದಶಮಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಬಸವಣ್ಣ 12ನೇ ಶತಮಾನದಲ್ಲಿಯೇ ವಚನಗಳ ಮೂಲಕ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಅವರು ರಚಿಸಿರುವ ವಚನಗಳು ಈಗಲೂ ಜೀವಂತವಾಗಿವೆ. ಜನರ ನಾಲಿಗೆಯಲ್ಲಿ ನಲಿದಾಡುತ್ತಿವೆ’ ಎಂದು ಹೇಳಿದರು.

‘ನವರಾತ್ರಿ ಹಬ್ಬದ ಅಂಗವಾಗಿ ವಚನಜ್ಯೋತಿ ಬಳಗದ ವತಿಯಿಂದ ಒಂಬತ್ತು ದಿನಗಳವರೆಗೂ ವಚನಕಾರ್ತಿಯರನ್ನು ಪರಿಚಯಿಸಲಾಗಿದೆ. ವಿಜಯದಶಮಿ ದಿನ ಬಸವಣ್ಣನವರ ವಚನ ಸಂಪುಟಗಳನ್ನು ಮೆರವಣಿಗೆ ಮಾಡುವುದರ ಮೂಲಕ ನಾಡಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಮಾತನಾಡಿದರು. ಚೆನ್ನಮಲ್ಲಯ್ಯ, ಬಸವರಾಜು, ಚಂದ್ರಶೇಖರಯ್ಯ, ಮಲ್ಲಿಕಾರ್ಜುನ್, ಪ್ರಭು ಇಸುವನಹಳ್ಳಿ, ರಾಜಾಗುರುಪ್ರಸಾದ್, ರುದ್ರೇಶ್, ಗುರುಪ್ರಸಾದ್ ಕುಚ್ಚಂಗಿ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.