ADVERTISEMENT

ಸತೀಶ ಜಾರಕಿಹೊಳಿ ‘ಹಿಂದೂ’ ಪದ ವಿವಾದ: ತನಿಖೆ ಮಾಡುವುದಕ್ಕೆ ಏನಿದೆ ಎಂದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 19:41 IST
Last Updated 9 ನವೆಂಬರ್ 2022, 19:41 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಳಗಾವಿ: ‘ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಹೀಗಿರುವಾಗ ಶಾಸಕ ಸತೀಶ ಜಾರಕಿಹೊಳಿ ಮಾತು ಆಡಿದ್ದಷ್ಟೇ ಅಲ್ಲ, ಅದನ್ನು ಸಮರ್ಥಿಸಿಕೊಳ್ಳುವ ಸಾಹಸ ಮಾಡಿದರು. ಈಗ ವಿಷಾದ ವ್ಯಕ್ತಪಡಿಸಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

‘ಹಿಂದೂ’ ಪದದ ಬಗ್ಗೆ ತಾವು ನೀಡಿದ್ದ ಹೇಳಿಕೆ ಹಿಂದಕ್ಕೆ ಪಡೆದಿರುವುದಾಗಿ ಸತೀಶ ಜಾರಕಿಹೊಳಿ ಬರೆದ ಪತ್ರದ ವಿಚಾರವಾಗಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರು ಪ್ರತಿಕ್ರಿಯಿಸಿದರು.

‘ಸತೀಶ ಅವರು ಶಬ್ದಕೋಶ ನೋಡಿ ಮಾತನಾಡಿದ್ದೇನೆ ಎನ್ನುತ್ತಾರೆ. ಆದರೆ, ಅದರ ಅರ್ಹತೆ ಏನು? ಈಗಾಗಲೇ ವಿಕಿಪೀಡಿಯಾ ಹಲವು ಬಾರಿ ತನಿಖೆಗೆ ಒಳಪಟ್ಟಿದೆ. ಆ ಸಂಸ್ಥೆಯ ಮುಖ್ಯಸ್ಥನ ಮೇಲೆ ಹಲವು ಪ್ರಕರಣಗಳಿವೆ’ ಎಂದ ಬೊಮ್ಮಾಯಿ, ‘ನನಗೆ ಅವರು ನೀಡಿರುವ ಪತ್ರದಲ್ಲಿ ಯಾವ ಅಂಶಗಳಿವೆ ಎಂಬುದನ್ನು ಪರಿಶೀಲಿಸುತ್ತೇನೆ. ತನಿಖೆ ಮಾಡುವುದಕ್ಕೆ ಏನಿದೆ’ ಎಂದು ಪ್ರಶ್ನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.