ADVERTISEMENT

ಯಾವ ಪರಿ ರಾಜ್ಯ ದಿವಾಳಿ ಮಾಡಿದ್ದಾರೆನ್ನುವುದಕ್ಕೆ ರಾಯರೆಡ್ಡಿ ಹೇಳಿಕೆ ಸಾಕ್ಷಿ:BJP

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜುಲೈ 2025, 16:17 IST
Last Updated 7 ಜುಲೈ 2025, 16:17 IST
<div class="paragraphs"><p>ಬಸವರಾಜ ರಾಯರೆಡ್ಡಿ</p></div>

ಬಸವರಾಜ ರಾಯರೆಡ್ಡಿ

   

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಯಾವ ಪರಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎನ್ನುವುದಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರ ಇತ್ತೀಚಿನ ಹೇಳಿಕೆಯೇ ಸಾಕ್ಷಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ರಾಯರೆಡ್ಡಿ ಅವರ ಹೇಳಿಕೆ ವಿಡಿಯೊ ಹಂಚಿಕೊಂಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ‘ಅಕ್ಕಿ ಬೇಕು ಎಂದರೆ, ರಸ್ತೆ ಇಲ್ಲ. ರಸ್ತೆ ಬೇಕು ಎಂದರೆ, ಅಕ್ಕಿ ಇಲ್ಲವೆಂದು ಹೇಳುತ್ತಾರೆ ಎಂದರೆ ಇದು ದಿವಾಳಿತನಕ್ಕೆ ಸಾಕ್ಷಿ’ ಎಂದು ಹೇಳಿದೆ.

ADVERTISEMENT

‘ಇದುವೇ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರದ ಬೋಗಸ್ ಗ್ಯಾರಂಟಿಯ ಅಸಲಿಯತ್ತು. ಸ್ವಯಂ ಘೋಷಿತ ಭ್ರಷ್ಟ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರು ಯಾವ ಪರಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ’ ಎಂದು ಆರೋಪಿಸಿದೆ.

‘ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಜನರಿಗೆ ಆಯ್ಕೆಗಳನ್ನು ನೀಡುವ ಮೂಲಕ ಸರ್ಕಾರದ ದಿವಾಳಿತನವನ್ನು ಬಟಾ ಬಯಲು ಮಾಡಿದ್ದಾರೆ’ ಎಂದು ಲೇವಡಿ ಮಾಡಿದೆ.

ಕೊಪ್ಪಳ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಸವರಾಜ ರಾಯರೆಡ್ಡಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.