ADVERTISEMENT

ಬಾಗಲಕೋಟೆ: ತೇಜಸ್ವಿನಿ ಅನಂತಕುಮಾರ್‌ಗೆ ‘ಬಸವಾತ್ಮಜೆ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:31 IST
Last Updated 9 ಜನವರಿ 2023, 19:31 IST
ತೇಜಸ್ವಿನಿ ಅನಂತಕುಮಾರ್
ತೇಜಸ್ವಿನಿ ಅನಂತಕುಮಾರ್   

ಬಾಗಲಕೋಟೆ: ‘ ಜಿಲ್ಲೆಯ ಕೂಡಲಸಂಗಮದಲ್ಲಿ ಲಿಂಗಾಯತ ಧರ್ಮ ಸಂಸ್ಥಾಪನಾ ದಿನ ಅಂಗ ವಾಗಿ ಜ.12 ರಿಂದ 14ರ ವರೆಗೆ 36ನೇ ಶರಣ ಮೇಳ ಹಮ್ಮಿಕೊಳ್ಳಲಾಗಿದೆ’ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

‘ಜ.12 ರಂದು ರಾಷ್ಟ್ರೀಯ ಬಸವ ದಳದ 32ನೇ ಅಧಿವೇಶನ ನಡೆಯಲಿದೆ. ಸಂಜೆ 6 ಗಂಟೆಗೆ ‘ಭಾರತ ಇತಿಹಾಸದಲ್ಲಿ ಮಹಿಳಾ ಕ್ರಾಂತಿ’ ಕುರಿತು ಮಹಿಳಾ ಗೋಷ್ಠಿನಡೆಯಲಿದ್ದು, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

‘ಜ.13 ರಂದು ಶರಣ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಇದೇ ವೇಳೆ ₹51 ಸಾವಿರ ನಗದು ಪುರಸ್ಕಾರ ಹೊಂದಿರುವ ರಾಷ್ಟ್ರಮಟ್ಟದ ‘ಬಸವಾತ್ಮಜೆ’ ಪ್ರಶಸ್ತಿಯನ್ನು ತೇಜಸ್ವಿನಿ ಅನಂತಕುಮಾರ್ ಅವರಿಗೆ ಪ್ರದಾನ ಮಾಡಲಾ ಗುವುದು’ ಎಂದು ಹೇಳಿದರು.

ADVERTISEMENT

‘ಸಂಜೆ ಲಿಂಗಾಯತ–ಬಸವ ಧರ್ಮ ಪೀಠದ 31ನೇ ಪೀಠಾರೋಹಣ ನಡೆಯಲಿದ್ದು, ಮಾತೆ ಗಂಗಾದೇವಿ ಪೀಠಾ ರೋಹಣ ಮಾಡಲಿದ್ದಾರೆ. ಜ.14 ರಂದು ‘ಸಾಮೂಹಿಕ ವಚನ ಪಠಣ’ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಾಮೂ ಹಿಕ ಇಷ್ಟಲಿಂಗಾರ್ಚನೆ ನಡೆ ಯಲಿದೆ. ಲಿಂಗಾಂಗಯೋಗ ಪ್ರಾತ್ಯಕ್ಷಿಕೆಯನ್ನು ಬಸವಕುಮಾರ ಸ್ವಾಮೀಜಿ ನೆರವೇರಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.