ADVERTISEMENT

‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂಬ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 13:56 IST
Last Updated 3 ಡಿಸೆಂಬರ್ 2020, 13:56 IST
   

ಮಡಿಕೇರಿ: ‘ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳೆಂದು ಹೇಳಿದ್ದೇನೆಯೇ ಹೊರತು, ರೈತರೆಲ್ಲರೂ ಹೇಡಿಗಳೆಂದು ಎಲ್ಲಿಯೂ ಹೇಳಿಲ್ಲ. ರೈತರು ಈ ದೇಶಕ್ಕೆ ಅನ್ನ ನೀಡುವ ಅನ್ನದಾತರು’ ಎಂದು ಸಚಿವ ಬಿ.ಸಿ.ಪಾಟೀಲ ಸ್ಪಷ್ಟನೆ ನೀಡಿದ್ದಾರೆ.

‘ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸಾಂತ್ವನ ಹೇಳುವುದು ದೊಡ್ಡ ವಿಷಯವಲ್ಲ. ಆತ್ಮಹತ್ಯೆಗೆ ಶರಣಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಹೇಡಿಗಳ ಕೆಲಸ. ಪುರಾಣದಲ್ಲೂ ಈ ಕುರಿತು ಉಲ್ಲೇಖವಿದೆ. ನಾನು ಕೃಷಿ ಮಂತ್ರಿಯಾಗಿ, ರೈತರನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವೆ. ಅವರು ಆತ್ಮಹತ್ಯೆಗೆ ಶರಣಾಗಬಾರದೆಂದು ಮನವಿ ಮಾಡಿರುವ ಕಾರಣಕ್ಕೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ಬಂದ ಸಂಕಷ್ಟ ಎದುರಿಸಿ, ಧೈರ್ಯದಿಂದ ಜೀವನ ಮಾಡಿ ಎಂದು ಮನವಿ ಮಾಡುವುದು ತಪ್ಪಾ’ ಎಂದು ಸಚಿವರು ‍ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.